
ಸಕಲೇಶಪುರ: ನೂತನ ಸಂಸತ್ ಭವನದ ಮೊದಲ ಕಲಾಪದಲ್ಲಿ ಶೇ’/. 33 ರಷ್ಟು ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಿರುವುದನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಪುರಸಭೆ ಸದಸ್ಯೆ ಅನ್ನಪೂರ್ಣ ಸ್ವಾಗತಿಸಿದ್ದಾರೆ.
TV46 ವೆಬ್ ಡಿಜಿಟಲ್ ಚಾನಲ್ ನೊಂದಿಗೆ ಮಾತನಾಡಿದ ಅವರು ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಆಡಳಿತ ನಡೆಸಬಲ್ಲವರಾದರೂ ಅವಕಾಶಗಳು ಸಿಗುತ್ತಿರಲಿಲ್ಲ ಲೋಕಸಭೆ ವಿಧಾನಸಭಾ ಚುನಾವಣೆಗಳಲ್ಲಿ ಒಂದೋ ಅಥವಾ ಎರಡೋ ಕ್ಷೇತ್ರದಲ್ಲಿ ಅವಕಾಶ ಸಿಗುತ್ತಿತ್ತು. ಮಸೂದೆ ಅನುಮೋದನೆಗೊಂಡರೆ ಶೇ 33 ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ಆದ್ಯತೆಯಲ್ಲಿ ಸಿಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
