
ಸಕಲೇಶಪುರ : ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಪರ ಇಂದು ಪಟ್ಟಣದಲ್ಲಿ ಚಲನಚಿತ್ರ ನಟಿ ಹಾಗೂ ಬಿಜೆಪಿ ಮುಖಂಡೆ ಮಾಳವಿಕ ಅವರು ಪಟ್ಟಣದಲ್ಲಿ ಅಂಗಡಿ ಮುಗ್ಗಟುಗಳಿಗೆ ತೆರಳಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಓಲೈಕೆ ರಾಜಕಾರಣ ಮಾಡುತ್ತ ಪಿಎಫ್ಐ ಯಂತಹ ಸಂಘಟನೆಗಳು ನೆರೆ ರಾಜ್ಯ ಕೇರಳದಲ್ಲಿ ಭಯೋತ್ಪಾದನೆ ದೇಶ ದ್ರೋಹ ಚಟುವಟಿಕೆ ಮಾಡುವ ಮೂಲಕ ದೇಶ ದ್ರೋಹಿ ಕೆಲಸ ಮಾಡುವ ಸಂಘಟನೆಗಳ ಪರ ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಇ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ರಾಷ್ಟ್ರ ಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬ, ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಹಾಗೂ ಪಕ್ಷದ ಇತರೆ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ : ಪ್ರಧಾನ ಸಂಪಾದಕರು.. ಎಸ್ ಎಮ್ ಮಂಜುನಾಥ.ಸಂಪಾದಕರು.. ಎಂಬಿ ಉಮೇಶ್.ಸಂಕಲನಕಾರ.. ಮೋಹನ್ Fcc.ವ್ಯವಸ್ಥಾಪಕರು.. ರಾಕೇಶ್, ಶೇಷಾದ್ರಿ.
