ಆಲೂರು ಪಟ್ಟಣದಲ್ಲಿ ಆಯೋಜಿಸಿದ್ದ ರೋಡ್ ಶೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭವಾನಿ ರೇವಣ್ಣ ಇವರು ಜೆ.ಡಿ.ಎಸ್ ತಾಲ್ಲೂಕು ಕಚೇರಿ ಆವರಣದಿಂದ ಕೆ.ಇ.ಬಿ ವರೆಗೆ ಹಾಗೂ ಕೆ.ಇ.ಬಿ ಯಿಂದ ಕೊನೆಪೇಟೆಯವರೆಗೆ ರೋಡ್ ಶೋ ಮೂಲಕ ಶಾಸಕ ಹೆಚ್.ಕೆ ಕುಮಾರಸ್ವಾಮಿಯವರ ಪರ ಮತಯಾಚನೆ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಗತ್ಯವಸ್ತುಗಳ ಬೆಲೆ ಹಾಗೂ ದಿನಸಿ ಪದಾರ್ಥಗಳ ಬೆಲೆ ಹೆಚ್ಚಿರುವುದರಿಂದ ಜನಸಾಮಾನ್ಯರು ಕೊಳ್ಳಲು ಪರದಾಡುವಂತಾಗಿದೆ. ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ತಿಳಿಸಿರುವಂತೆ ಪಂಚರತ್ನ ಯೋಜನೆಗಳಲ್ಲಿ ರಾಜ್ಯದಲ್ಲಿ ಜಾರಿಗೊಳಿಸುವುದರ ಮೂಲಕ ರೈತರಿಗೆ, ವೃದ್ಧರಿಗೆ ಪಿಂಚಣಿ, ಜನಸಾಮಾನ್ಯರಿಗೆ 5 ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗುವುದು. ಹಾಸನ ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲೂ ಅತ್ಯಧಿಕ ಮತಗಳಿಂದ ನಮ್ಮ ಪಕ್ಷ ಗೆಲುವು ಸಾಧಿಸುವುದು ನಿಶ್ಚಿತ ಎಂದು ತಿಳಿಸಿದರು.ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಮೂಲಕ ಅವರಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹೆಚ್. ಬಿ ಧರ್ಮರಾಜ್, ದೇವೇಂದ್ರ, ಆಶಾ ಮುಂತಾದವರು ಬಿ.ಜೆ.ಪಿ ಪಕ್ಷವನ್ನು ತೊರೆದು ಜೆ.ಡಿ.ಎಸ್ ಪಕ್ಷವನ್ನು ಸೇರಿದರು. ಈ ಸಂಧರ್ಭದಲ್ಲಿ ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಯೊಗೇಶ್, ಮಲ್ಲಿಕಾರ್ಜುನ್, ಗೌಡಪ್ಪ, ಮಂಜೇಗೌಡ, ಗೋಪಿನಾಥ್,ದೊರೆಸ್ವಾಮಿ, ವೀರಭದ್ರಸ್ವಾಮಿ, ಪಾಣಿ, ಹಾಗೂ ಜೆ.ಡಿ.ಎಸ್ ಕಾರ್ಯಕರ್ತರು ಇದ್ದರು.

ವರದಿ : ಪ್ರಧಾನ ಸಂಪಾದಕರು.. ಎಸ್ ಎಮ್ ಮಂಜುನಾಥ್

ಸಂಪಾದಕರು.. ಎಂಬಿ ಉಮೇಶ್.

ಸಂಕಲನಕಾರ.. ಮೋಹನ್ Fcc

ವ್ಯವಸ್ಥಾಪಕರು.. ರಾಕೇಶ್, ಶೇಷಾದ್ರಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *