
ಕೆಲವು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾದ ನಾಡೋಜ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸಾಲು ಮರದ ತಿಮ್ಮಕ್ಕ ರವರ ಆರೋಗ್ಯ ಸುಧಾರಿಸಿದೆ. ಹಗಲು ರಾತ್ರಿ ಎನ್ನದೆ ನಿದ್ರೆ ಕೆಟ್ಟು ಅವರ ಉಪಚಾರ ಮಾಡಿದ ತಿಮ್ಮಕ್ಕ ನವರ ಪುತ್ರ ಉಮೇಶರವರಿಗೆ ನಾವು ಹೃದಯ ಪೂರ್ವಕ ಸಾಷ್ಟಾಂಗ ನಮಸ್ಕಾರವನ್ನು ಅರ್ಪಿಸುತ್ಠೇವೆ.
ಹೆತ್ತ ತಂದೆ ತಾಯಿಯನ್ನು ನೋಡಲಾಗದೆ ವೃದ್ಧಾಶ್ರಮಕ್ಕೆ ದಬ್ಬುವ ಮಕ್ಕಳಿರುವ ಈ ಕಾಲದಲ್ಲಿ ಇಂತಹ ಮಗನನ್ನು ಪಡೆದ ಆ ತಾಯಿಯೇ ಧನ್ಯ. ಇವರಿಬ್ಬರ ಸಂಬಂಧ ಸದಾಕಾಲ ಹೀಗೆ ಇರಲಿ ಮತ್ತು ಸಾಲುಮರದ ತಿಮ್ಮಕ್ಕನವರ ಆರೋಗ್ಯ ಇನ್ನಷ್ಟು ಸುಧಾರಿಸಲು ನಮ್ಮ ಮಲೆನಾಡು ರಕ್ಷಣಾ ಸೇನೆಯ ವತಿಯಿಂದ ಪ್ರಾರ್ಥನೆ. ಸಾಗರ್ ಜಾನೇಕೆರೆಸಂಸ್ಥಾಪಕ ರಾಜ್ಯಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ




