
2023-24 ನೇ ಸಾಲಿನ ಮೊದಲನೇ ಹಂತದ ವಳಲಹಳ್ಳಿ ಗ್ರಾಮಪಂಚಾಯಿತಿಯ ಗ್ರಾಮ ಸಭೆಯನ್ನು 13-10-2023 ರ ಶುಕ್ರವಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶೀಲಾ ಮಹೇಂದ್ರ ವಿ. ಟಿ ಅವರ ಅಧ್ಯಕ್ಷತೆಯಲ್ಲಿ ನೆಡೆಸಲಾಯಿತು.
ಗ್ರಾಮ ಸಭೆಗೆ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಸಕಲೇಶಪುರ ತಾಲ್ಲೂಕು ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕರಾದ ಡಾಕ್ಟರ್ ವೆಂಕಟೇಶ್, ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಾಮಕೃಷ್ಣ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಧರ್ಮಪ್ಪ ಜ್ಯೋತಿ ಬೆಳಗಿಸುವ ಮೂಲಕ ಗ್ರಾಮ ಸಭೆಗೆ ಚಾಲನೆ ನೀಡಿದರು.
ಗ್ರಾಮ ಸಭೆಗೆ ಆಗಮಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಕೆಲವು ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭಾಗವಹಿಸಿ ಮಾಹಿತಿ ಕೊಟ್ಟ.ಹೆತ್ತೂರು ಹೋಬಳಿ ಕೃಷಿ ಅಧಿಕಾರಿ ಕೇಶವ್ ಮೂರ್ತಿ ಮಾತನಾಡಿ “ನನ್ನ ಬೆಳೆ ನನ್ನ ಹಕ್ಕು ಎಂಬ ಸರ್ಕಾರದ ಯೋಜನೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಕೊಡುವ ಕೆಲಸ ಮಾಡುತ್ತಿದ್ದೆ.ಅಲ್ಲದೆ ರೈತರಿಗೆ ಕೃಷಿಗೆ ಸಂಬಂಧಪಟ್ಟ ಉಪಕರಣಗಳು ಹಾಗೂ ಹಾಗೂ ಬಿತ್ತನೆ ಬೀಜಗಳು ಕೃಷಿ ಇಲಾಖೆಯಲ್ಲಿ ಸಿಗುತ್ತಿದ್ದೆ ಇದನ್ನು ರೈತರು ಸಮಾಪಕವಾಗಿ ಬಳಸಿಕೊಳ್ಳಬೇಕು. “ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮನು ಮಾಹಿತಿ ನೀಡುತ್ತಾ ಕಾಳು ಮೆಣಸು ಹಾಗೂ ಅಡಿಕೆ ಬೆಳೆಗೆ ಸಂಬಂಧಪಟ್ಟಂತೆ ಸರ್ಕಾರದಿಂದ ಸಿಗುವ ಅನುದಾನವನ್ನು ಬಿಪಿಎಲ್ ಕಾರ್ಡ್ ಹೊಂದಿರುವ ರೈತರು ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಸಾಂಬಾರು ಮಂಡಳಿ ಅಧಿಕಾರಿ ಬಿ ಕೆ ರಮೇಶ್ ಮಾತನಾಡಿ ” ಎಲಕ್ಕಿ ನರ್ಸರಿ ಮಾಡಿರುವ ರೈತರಿಗೆ ಸರ್ಕಾರಿ ಇಂದ ಈ ಬಾರಿ ಅನುದಾನ ನೀಡುತಿದ್ದೆ. ಇದರ ಉಪಯೋಗವನ್ನು ನರ್ಸರಿ ಮಾಡುವ ರೈತರು ಪಡೆದುಕೊಳ್ಳಬೇಕು.ಹಾಗೂ ಕಾಳು ಬಿಡಿಸುವ ಯಂತ್ರಕ್ಕೆ 50ರಷ್ಟು ಸಬ್ಸಿಡಿ ನೀಡುತ್ತಿದ್ದು. ಇದನ್ನು ಪಡೆದುಕೊಳ್ಳಲು ಕಚೇರಿಗೆ ಬಂದು ಅರ್ಜಿ ಕೊಡುವ ಮೂಲಕ ಅನುದಾನದ ಲಾಭ ಪಡೆದುಕೊಳ್ಳಬೇಕು.ಎಂದರು ಅರಣ್ಯ ಇಲಾಖೆ (ಡಿಪಿಟಿ) ಆರ್ ಎಫ್ ಓ ವಿಜಿಕುಮಾರ್ ಮಾತನಾಡಿ ” ಕಾಡಾನೆಗಳಿಂದ ಬೆಳೆ ಹಾನಿಯಾದಲ್ಲಿ ಸಂಬಂಧಪಟ್ಟ ರೈತರು ಸರ್ಕಾರದಿಂದ ಸಿಗುವ ಪರಿಹಾರವನ್ನು ಪಡೆದುಕೊಳ್ಳಲು ಸಂಪರ್ಕಿಸಬಬೇಕು ಹಾಗೂ ಹನಿಗೆ ಸಂಬಂಧ ಪಟ್ಟ ಪರಿಹಾರ, ಅಲ್ಲದೆ ರೈತರು ಜಮೀನಿಗೆ ಸೋಲಾರ್ ಬೇಲಿಯನ್ನು ಹಾಕಿಸಿಕೊಳ್ಳಲು ನಮ್ಮ ಇಲಾಖೆಯಿಂದ ಅನುದಾನದ ವೆವಸ್ಥೆ ಇರುತ್ತದೆ ಅದನ್ನು ಈ ಭಾಗದ ರೈತರು ಅನುಕೂಲ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಯಸಳೂರು ಕಾಫಿ ಬೋರ್ಡ್ ಅಧಿಕಾರಿಗಳದ ಬಸವರಾಜ್ ಮಾತನಾಡಿ ” ಮರುನಾಟಿ ಮಾಡುವ ರೈತರಿಗೆ ಎಕರಿಗೆ 44 ಸಾವಿರ, ರೋಬೋಸ್ಟಾ ಕಾಫಿ ಗಿಡಗಳಿಗೆ 35ಸಾವಿರ, ಹಾಗೂ ರೈತರು ವಾಟರ್ ಟ್ಯಾಂಕ್ ಹಾಗೂ ರಿಂಗ್ ಬಾವಿಗಳನ್ನು ಮಾಡಿಕೊಳ್ಳಲು ಸರ್ಕಾರದಿಂದ 30ಸಾವಿರ ಸಬ್ಸಿಡಿ ಕೊಡುತ್ತಿದೆ. ಅಲ್ಲದೆ ಮೋಟಾರ್ , ಪೈಪುಗಳು ಸೇರಿದಂತೆ ಇತರೆ ಕೃಷಿಗೆ ಸಂಬಂಧಪಟ್ಟ ಅನುದಾನಗಳು 25 ಎಕರೆ ವರೆಗೂ ಇರುವ ರೈತರಿಗೆ ಸಿಗುತ್ತದೆ. ಎಂದು ಹೇಳಿದರು. ಒಟ್ಟಾರೆ ಈ ಬಾರಿಯ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗೂ ಅತ್ಯಂತ ಶಾಂತಿಯುತವಾಗಿ ರೈತರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನು ಅಧಿಕಾರಿಗಳು ಕೊಡುವ ಮೂಲಕ ನಡೆಯಿತು.
ಇದರ ಅನುಕೂಲವನ್ನು ಪಡೆದುಕೊಳ್ಳುವುದು ಅಥವಾ ಬಿಡುವುದು ಗ್ರಾಮಸ್ಥರಿಗೆ ಬಿಟ್ಟಿದ್ದು. ಈ ಸಂದರ್ಭದಲ್ಲಿ ಸಕಲೇಶಪುರ ತಾಲೂಕಿನ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಾದ ಡಾಕ್ಟರ್ ವೆಂಕಟೇಶ್, ತಾಲೂಕು ಪಂಚಾಯಿತಿ ನಿರ್ವಹಣಾ ಅಧಿಕಾರಿಗಳಾದ ರಾಮಕೃಷ್ಣ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮದ ಚುನಾಯಿತ ಸದಸ್ಯರು ಹಾಗೂ ಅತಿ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿದ್ದರು.



