
ಆಲೂರು :-ತಾಲ್ಲೂಕಿನಲ್ಲಿ 13ವರ್ಷಗಳ ಕಾಲ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ನಿರಂತರವಾಗಿ ಸೇವೆಯನ್ನು ಸಲ್ಲಿಸಿ ಜನ ಮನ್ನಣೆ ಗಳಿಸಿದ್ದ ಡಾ. ತಿಮ್ಮಯ್ಯ ರವರು ಪಡ್ತಿ ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ವರ್ಗಾವಣೆ ಗೊಂಡ ಪ್ರಯುಕ್ತ ಅವರಿಗೆ ಅದ್ದೂರಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು .
ಈ ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ರಘು ಪಾಳ್ಯ ,ಹಾಸನ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ ಶಿವಸ್ವಾಮಿ, ಜಿಲ್ಲಾ ಕ್ಷಯ ರೋಗದ ವಿಭಾಗದ ಮುಖ್ಯಸ್ಥರಾದ ಡಾ ನಾಗಪ್ಪ ,ಡಾಹರೀಶ್,ಡಾ ಶಿವಶಂಕರ್ ಡಾ ಸಂದ್ಯ ,ಡಾ ಜಯಪ್ರಕಾಶ್,ಡಾ ರಂಗನಾಥ್, ಡಾಕ್ಟರ್ ಆನಂದ್ ಆಲೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಹಾಗೂ ಆಲೂರಿನ ಆಸ್ಪತ್ರೆಯ ಸಮಸ್ತ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಹಾಗೂ ಆಲೂರಿನ ನಾಗರಿಕರು , ಪತ್ರಿಕಾ ಮಾಧ್ಯಮದವರು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ ತಿಮ್ಮಯ್ಯ ರವರ ಕಾರ್ಯ ಹಾಗೂ ಕರೋನ ಸಂದರ್ಭದಲ್ಲಿ ಅವರ ಪ್ರಾಮಾಣಿಕ ಸೇವೆಯ ಬಗ್ಗೆ ಸಾರ್ವಜನಿಕರು ಮೆಚ್ಚುಗೆಯ ಮಾತುಗಳನ್ನು ಹೇಳಿದರು.
ಹಾಗೂ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಶುಭಾಶಯಗಳನ್ನು ತಿಳಿಸಿದರು.ಆಲೂರು ತಾಲ್ಲೂಕಿನ ಆರೋಗ್ಯಾಧಿಕಾರಿ ಡಾ ಸಾಗರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು


