ಹಾಸನ: ನಗರದ ಆರ್.ಸಿ. ರಸ್ತೆ, ರಂಗೋಲಿ ಹಳ್ಳದ ಬಳಿ ಇಲ್ಲಿನ ಸ್ಥಳಿಯ ನಿವಾಸಿಗಳು, ಆಟೋ ಚಾಲಕರು, ಅಂಗಡಿ ಮಾಲೀಕರು ಎಲ್ಲಾ ಸೇರಿ ಕನ್ನಡ ಕಣ್ಮಣಿ ಪುನೀತ್ ರಾಜಕುಮಾರ್ ಸ್ಮರಣೆ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ರುಚಿಕರವಾದ ಬಿರಿಯಾನಿಯನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮತ್ತು ಅರುಣ್ ಕುಮಾರ್ ಮಾತನಾಡಿ, ಬಡವರ ಬಂದು ಡಾ. ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಸ್ಮರಣೆಯ ಅಂಗವಾಗಿ ರಂಗೋಲಿ ಹಳ್ಳ, ಆಟೋ ನಿಲ್ದಾಣದ ಪಿಡಬ್ಲ್ಯೂಡಿ ಆಟೋ ನಿಲ್ದಾಣ, ಯುವಕರು ಹಾಗೂ ಇಲ್ಲಿನ ಸುತ್ತಮುತ್ತಲಿನ ಎಲ್ಲಾರು ಸೇರಿ ಸ್ಮರಣೀಯ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಇಂತಹ ಆಚರಣೆ ಮೂಲಕ ಪುನೀತ್ ರಾಜಕುಮಾರ್ ಅವರಿಗೆ ಶಾಂತಿ ಕೋರಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶವಿದೇಶಗಳಲ್ಲಿ ಹೆಸರು ಮಾಡಿರುವಂತಹ ಪುನೀತ್ ಅವರು ನಮ್ಮನ್ನು ಅಗಲಿದ್ದಾರೆ. ಆದರೇ ಅವರ ನೆನಪು ಶಾಶ್ವತವಾಗಿ ನಮ್ಮ ಜೊತೆ ಇರುತ್ತದೆ. ಪುನೀತ್ ಅವರ ಅತ್ಯಂತ ಪ್ರಿಯವಾದ ಬೋಜನ ಬಿರಿಯಾನಿ ಆಗಿರುವುದರಿಂದ ಶೇಕಡ ೯೦ ರಷ್ಟು ಮಾಂಸಹಾರಿ ಅನ್ನಸಂತರ್ಪಣೆ ಮಾಡುವುದರ ಮೂಲಕ ನೆನಪಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *