
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಾಂತಿವಾಸು (28) ಹತ್ಯೆಯಾದವಳು. ಪತಿ ಪವನ್ ಕುಮಾರ್ ಆರೋಪಿಯಾಗಿದ್ದಾನೆ.
ಮೂರು ತಿಂಗಳ ಹಿಂದೆ ಪವನ್ ಕುಮಾರ್ ಹಾಗೂ ಶಾಂತಿವಾಸು ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಪವನ್ ಕುಮಾರ್ ಪತ್ನಿ ಶಾಂತಿವಾಸು ಮೇಲೆ ಹಲ್ಲೆ ಮಾಡಿದ್ದ. ಗಂಭೀರ ಗಾಯಗೊಂಡಿದ್ದ ಶಾಂತಿ ಸ್ಥಳದಲ್ಲೇ ಅಸುನೀಗಿದ್ದಳು.
ಅವರಿಬ್ಬರು ಒಬ್ಬರೊಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರ ಪ್ರೀತಿಯ ಫಲವಾಗಿ ಮಕ್ಕಳಿಬ್ಬರು ಜನಿಸಿದ್ದರು. ಹೀಗಿರುವಾಗ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆಯೂ ಗಲಾಟೆ ನಡೆದಿತ್ತು.
ಗಲಾಟೆ ವಿಕೋಪಕ್ಕೆ ತಿರುಗಿ, ಕೋಪದ ಕೈಗೆ ಬುದ್ಧಿ ಕೊಟ್ಟ ಪತಿ-ಪತ್ನಿಯನ್ನೇ ಕೊಂದು ಬಿಟ್ಟಿದ್ದ.
ಯಾರಿಗೂ ತಿಳಿಯದಂತೆ ಮಣ್ಣಿನಲ್ಲಿ ಹೂತಿಟ್ಟು, ಊರು ಬಿಟ್ಟಿದ್ದ. ಆದರೆ ಮೂರು ತಿಂಗಳ ಬಳಿಕ ಬೀದಿ ನಾಯಿಗಳಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ.



