ಸಕಲೇಶಪುರ :- ಗ್ರಾಮೀಣಭಿವೃದ್ಧಿ ಪಂಚಾಯತ್ ರಾಜ್ಇಲಾಖೆ,ಜಿಲ್ಲಾ ಪಂಚಾಯತ್ ಹಾಸನ, ತಾಲ್ಲೂಕು ಪಂಚಾಯತ್ ಸಕಲೇಶಪುರ,ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆಯ ವತಿಯಿಂದ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಮೂಲಕ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಲಾಗಿದೆ.

ಇದರ ಪ್ರಯುಕ್ತ ಇಂದು ಕುರಬತ್ತೂರು ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟನೆ ಮಾಡಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಿಡುಗೆರೆ ಮಂಜು ನಾಮಫಲಕ ತೋರಿಸುವುದರೊಂದಿಗೆ ಡಿಜಿಟಲ್ ಗ್ರಂಥಾಲಯದ ಮಕ್ಕಳಿಂದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶುಕ್ರವಾರ ಸಂತೆ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು ಸರತಿ ಸಾಲಿನಲ್ಲಿ ಶುಕ್ರವಾರ ಸಂತೆಯ ಮುಖ್ಯ ರಸ್ತೆಯಲ್ಲಿ ಗ್ರಂಥಾಲಯದ ಅರಿವು ಮೂಡಿಸುವ ಬಗ್ಗೆ ನಾಮಫಲಕ ಹಿಡಿದು ಗ್ರಂಥಾಲಯದ ಅರಿವು ಮೂಡಿಸುವ ಘೋಷಣೆ ಕೂಗುವ ಮೂಲಕ ಪಥ ಚಾಲನೆ ಮಾಡಿ ನೆರೆದಿದ್ದವರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಿಡುಗೆರೆ ಮಂಜು, ಉಪಾಧ್ಯಕ್ಷರಾದ ಕಮಲ, ಜಿಲ್ಲಾ ಸಂಯೋಜಕರಾದ ರಾಘವೇಂದ್ರ,ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅರ್ಜುನ್ , ಪರಮೇಶ್, ಗ್ರಂಥಪಾಲಕರಾದ ಗೀತಾ,ಶಿಕ್ಷಕಿಯರಾದ ನಾಗಲಂಬಿಕಾ, ಗೀತಾ,ನಂದಿನಿ, ದಿನೇಶ್, ತಾಲ್ಲೂಕು ಸಂಯೋಜಕರಾದ ವಿನಿತ್ ಕುಮಾರ್,ಸೇರಿದಂತೆ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *