ಸಕಲೇಶಪುರ :- ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗಾಲ ಗ್ರಾಮದಲ್ಲಿ ಇಂದು ಜಿಲ್ಲಾ ಪಂಚಾಯತ್ ಹಾಸನ, ತಾಲೂಕು ಪಂಚಾಯಿತಿ ಸಕಲೇಶಪುರ,ಪಶು ಪಾಲನಾ,ಮತ್ತು ಪಶುವೈದ್ಯ ಸೇವಾ ಇಲಾಖೆವತಿಯಿಂದ ಜಾನುವಾರು ಮತ್ತು ಕರುಗಳ ಪ್ರದರ್ಶನ ಹಾಗೂ ಸಾಕುನಾಯಿಗಳಿಗೆ ಉಚಿತ ರೇಬೀಸ್ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ತಾಲೂಕು ಪಶು ವೈದ್ಯಧಿಕಾರಿ ಡಾಕ್ಟರ್ ವೆಂಕಟೇಶ್ ಸಾಕು ನಾಯಿಗಳಿಗೆ ಲಸಿಕೆ ಚುಚ್ಚುಮದ್ದನ್ನು ನೀಡುವ ಮೂಲಕ ಉದ್ಘಾಟನೆ ಮಾಡಿದರು.

ಕರಡಿಗಾಲದ ಗ್ರಾಮಸ್ಥರು ತಾವು ಸಾಕಿದ ನಾಯಿಗಳಿಗೆ ಬೆಳಗ್ಗೆ 10 ಗಂಟೆಯಿಂದ ರೇಬೀಸ್ ಲಸಿಕೆ ಹಾಕಿಸಿಕೊಂಡರು.

ನಂತರ ಮಧ್ಯಾಹ್ನ ಜಾನುವಾರುಗಳು ಹಾಗೂ ಕರುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಗ್ರಾಮಸ್ಥರು ತಾವು ಸಾಕಿದ ಹಸುಗಳನ್ನು ಹಾಗೂ ಕರುಗಳನ್ನು ಸ್ವಚ್ಛ ಮಾಡಿ ಅಲಂಕಾರ ಮಾಡಿ ಪ್ರದರ್ಶನ ನಡೆಯುವ ಸ್ಥಳಕ್ಕೆ ಕರೆತಂದಿದ್ದರು.

ಅಲಂಕಾರಗೊಂಡ ಕರುಗಳು ಹಾಗೂ ಜಾನುವಾರುಗಳು ಒಂದಕ್ಕಿಂತ ಒಂದು ಆಕರ್ಷಣೆಯಲ್ಲಿ ನೆರೆದಿದ್ದವರ ಹಾಗೂ ತೀರ್ಪುಗಾರರ ಮನ ಗೆದ್ದು ಬಹುಮಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದವು .

ಒಟ್ಟು 50ಕ್ಕೂ ಹೆಚ್ಚು ಜಾನುವಾರುಗಳು ಮತ್ತು ಕರುಗಳು ಇದ್ದು ಅವುಗಳಲ್ಲಿ ಹೆಚ್ ಎಫ್ ಮೂರು, ಜರ್ಸಿ ಮೂರೂ ಹಾಗೂ 4 ಕರುಗಳು ಬಹುಮಾನಕ್ಕೆ ಪಾತ್ರರಾದವು. ಆಯ್ಕೆಯಾದ ಹಸು ಮತ್ತು ಕರುಗಳ ಮಾಲೀಕರಿಗೆ ಹಾಲಿನ ಕ್ಯಾನನ್ನು ಬಹುಮಾನವಾಗಿ ನೀಡಲಾಯಿತು.

ಕಾರ್ಯಕ್ರಮವನ್ನು ಆ ಯೋಜನೆ ಮಾಡಿದ ಗ್ರಾಮದ ಕೆ ಎಸ್ ಶಿವಣ್ಣ ಹಾಗೂ ಪಶು ಸಂಗೋಪನ ಅಧಿಕಾರಿಗಳಿಂದ ಗ್ರಾಮಸ್ಥರು ಪಶುಗಳ ಬಗ್ಗೆ ಹಾಗೂ ಸಾಕು ನಾಯಿಗಳ ಬಗ್ಗೆ ಜಾಗೃತಿ ಹಾಗೂ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *