ಹಾಸನ: ಜಿಲ್ಲೆಗೆ ನವೆಂಬರ್ 7 ರಂದು ಸದಾನಂದಗೌಡರ ನೇತೃತ್ವದಲ್ಲಿ ಕೇಂದ್ರದಿಂದ ಬರ ಪರಿಹಾರ ತಂಡ ಆಗಮಿಸಲಿದ್ದು, ಎಲ್ಲಾ ತಾಲೂಕಿಗೂ ಪ್ರಯಾಣ ಬೆಳೆಸಿ ರೈತರ ಸಂಕಷ್ಟದದ ಬಗ್ಗೆ ಮಾಹಿತಿ ಪಡೆಯಲಿದೆ.

ಇನ್ನು ರಾಜ್ಯ ಸರಕಾರವು ಇದುವರೆಗೂ ಬರ ಪರಿಹಾರವನ್ನು ಏಕೆ ನೀಡಿರುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಕಿಡಿಕಾರಿದರು.

ನಗರದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷಗಳನ್ನು ಮತ್ತು ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೆ ಮತ್ತು ಗುತ್ತಿಗೆದಾರರಿಂದ ಕಮಿಷನ್ ವಿಚಾರ ಇತರೆ ದಂಧೆಯಲ್ಲೆ ಮುಳುಗಿದ್ದಾರೆ ಹೊರತು ಅಭಿವೃದ್ಧಿ ಕಡೆ ಗಮನಕೊಡುತ್ತಿಲ್ಲ.

ಕಳೆದ ವಾರದಿಂದ ಸಿದ್ದರಾಮಯ್ಯ ಅವರು ಕನ್ನಡದ ಅಸ್ಮಿತೆ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ಕಾವೇರಿ ನದಿ ನೀರು, ಮಹದಾಯಿ, ಮೇಕೆದಾಟು ವಿಚಾರದಲ್ಲಿ ನಮಗೆ ಮೋಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಮೇಕೆದಾಟು ಯೋಜನೆಯಲ್ಲಿ ಇದು ಸುಪ್ರಿಂ ಕೋರ್ಟಿನಲ್ಲಿದ್ದು, ಶೀಘ್ರ ತೀರ್ಪ ಬರಬೇಕೆಂದು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಇಷ್ಟಿದ್ದರೂ ಕೇಂದ್ರ ಸರಕಾರವು ನ್ಯಾಯ ಕೊಡುತ್ತಿಲ್ಲ ಎಂದು ಸುಳ್ಳನ್ನು ಪ್ರಧಾನಿಗೆ ಸಿಎಂ ಪ್ರರ್ಶನೆ ಹಾಕಿದ್ದಾರೆ ಎಂದರು.

ರಾಜ್ಯದಲ್ಲಿ ಬರ ಎಂದು ೨೧೬ ತಾಲೂಕನ್ನು ಘೊಷಣೆ ಮಾಡಲಾಗಿದ್ದು, ಕೇಂದ್ರದ ಮೇಲೆ ದೂರು ಮಾಡುವುದು ಬೇಡ. ಕಳೆದ ಆರು ತಿಂಗಳಲ್ಲಿ ಸುಮಾರು ೬೬ ಸಾವಿರ ಕೋಟಿ ರೂಗಳು ಕೇಂದ್ರದಿಂದ ರಾಜ್ಯಕ್ಕೆ ಹಣ ಬಂದಿದೆ. ಆದರೇ ಬರ ಪರಿಹಾರಕ್ಕೆ ಏಕೆ ಹಣ ಬಿಡುಗಡೆ ಮಾಡಿರುವುದಿಲ್ಲ ಎಂದು ಪ್ರಶ್ನಿಸಿದರು.

೬೦೦ ಕೋಟಿ ರೂ ಎಸ್.ಡಿ.ಪಿಯಲ್ಲಿ ಹಣವಿದ್ದು, ಬರಪರಿಹಾರ ನಿಧಿಗೆ ಏಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು. ರೈತ ಸಂಕಷ್ಟದಲ್ಲಿದ್ದು, ರಾಜ್ಯ ಸರಕಾರ ಕೂಡಲೆ ಬರ ಪರಿಹಾರ ಹಣ ಬಿಡುಗಡೆ ಮಾಡಲೆಂದು ಆಗ್ರಹಿಸಿದರು.

ಕೇಂದ್ರ ನಿಯೋಗ ಬಂದು ಹೋಗಿದ್ದು, ಕೇಂದ್ರ ಸರಕಾರವು ಖಂಡಿತ ಹಣ ಬಿಡುಗಡೆ ಮಾಡೆ ಮಾಡುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ರಾಜ್ಯ ಸರಕಾರವು ರೈತ ವಿರೋಧಿ ನೀತಿ ತಾಳಿರುವುದರಿಂದ ಬಿಜೆಪಿ ೧೬ ತಂಡ ಮಾಡಿ ಪ್ರತಿ ತಂಡ ಎರಡೆರಡು ಜಿಲ್ಲೆಯನ್ನು ಪರಿಶೀಲಿಸಿದೆ. ಸದಾನಂದಗೌಡರ ನೇತೃತ್ವದಲ್ಲಿ ತಂಡ ಬರುತ್ತಿದ್ದು, ನಾನು ಮತ್ತು ಇಲ್ಲಿನ ಪ್ರೀತಂ ಜೆ, ಗೌಡರು ಜೊತೆಯಲ್ಲಿ ಇರುತ್ತೇವೆ ಎಂದರು. ಆನೆ ದಾಳಿ, ಚಿgಚಿve, ದಾಳಿ, ಹಾವು ಕಡಿದು ಸಾವನ್ಪಪಿರುವುದು, ಬೆಳೆ ನಷ್ಟ ಸೇರಿದಂತೆ ರೈತರು ಎಲ್ಲೆಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಆ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ವರಧಿಯನ್ನು ಕೇಂದ್ರಕ್ಕೆ ಸಲ್ಲಿಸಿ ತಕ್ಷಣ ಹಣ ಬಿಡುಗಡೆ ಮಾಡುವುದಕ್ಕೆ ಒತ್ತಾಯಿಸಲಾಗುವುದು.

ನವೆಂಬರ್ 7 ರಂದು ಹಾಸನ ಜಿಲ್ಲೆಗೆ ಬರ ವೀಕ್ಷಣೆ ತಂಡ ಭೇಟಿ ಮಾಡುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ. ಸುರೇಶ್, ಮಾಜಿ ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾ ಉಪಾಧ್ಯಕ್ಷ ಆಡುವಳ್ಳಿ ಪ್ರಕಾಶ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ವಿಭಾಗ ಸಂಘಟನಾ ಕಾರ್ಯದರ್ಶಿ ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಹಿತ್, ಮನೋಜ್, ಪ್ರವೀಣ್ ಇತರರು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *