ಹಾಸನ: ಪ್ರತಿವರ್ಷ ಹಾಸನಾಂಬೆ ದೇವಾಲಯದ ಬಾಗಿಲು ತೆಗೆಯುತ್ತಾರೆ ಆದರೇ ಇಲ್ಲಿರುವ ನಿವಾಸಿಗಳ ಸಮಸ್ಯೆ ಕೇಳುವವರಿಲ್ಲ.

ಈ ವರ್ಷ ಆದ ಸಮಸ್ಯೆ ಯಾವ ವರ್ಷವೂ ಅಷ್ಟೊಂದು ಆಗಿರುವುದಿಲ್ಲ. ನಾವು ಒಂದು ತಿಂಗಳು ಓಡಾಡಬೇಕಾದರೇ ಹರಸಾಹಸಪಡಬೇಕು. ಪ್ರಶ್ನೆ ಮಾಡಿದರೇ ಮನೆಬಿಟ್ಟು ಒಂದು ತಿಂಗಳು ಹೊರಗೆ ಹೋಗಿ ಎಂದು ದೇವಾಲಯದ ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.

ವರ್ಷಕ್ಕೊಮ್ಮೆ ಹಾಸನಾಂಬೆ ದೇವಾಲಯದ ಬಾಗಿಲು ತೆಗೆಯುತ್ತಾರೆ. ಆದರೇ ನಮಗೆ ದರ್ಶನ ಮಾಡಲು ಅವಕಾಶ ಕೊಡುವುದಿಲ್ಲ ಹೊರಗೆ ಬರುವವರಿಗೆ ಹೇಗೆ ದರ್ಶನ ಕೊಡುತ್ತಾರೆ. 15 ದಿನ ಬಾಗಿಲು ತೆಗೆದರೇ ಇವರು ಒಂದು ತಿಂಗಳ ಮೊದಲೆ ನಾವು ಓಡಾಡುವ ಜಾಗ ಬಂದು ಮಾಡುತ್ತಾರೆ. ಕೇಳಿದರೇ ನಾವು ಏನು ತೀರ್ಮಾನ ಮಾಡುತ್ತೇವೆ ಅದನ್ನು ಪಾಲಿಸಬೇಕು.

ನಿಮಗೆ ಸಮಸ್ಯೆ ಆದ್ರೆ ಒಂದು ತಿಂಗಳು ಮನೆ ಬಿಟ್ಟು ಹೊರಗೆ ಹೋಗಿ, ಸಾರಿಗೆ ಬಸ್ ಕೂಡ ಉಚಿತ ಇದೆ ಎಂದು ಸಲಹೆ ನೀಡುತ್ತಾರೆ.

ಇದು ನಮದು ಜಾಗ ಮನೆ ಬಿಟ್ಟು ನಾವು ಎಲ್ಲಿಗೆ ಹೋಗಬೇಕು? ಸ್ಥಳೀಯರಿಗೆ ಜಾಗ ಇಲ್ಲ ಎಂದ ಮೇಲೆ ಹೊರಗಿನವರನ್ನು ಏಕೆ ಕರೆಯಿಸಬೇಕು. ಪ್ರತಿಯೊಂದಕ್ಕೂ ದುಡ್ಡು ದುಡ್ಡು ವಿಧಿಸುತ್ತಿದ್ದಾರೆ. ಇವರಿಗೆ ದರ್ಶನಕ್ಕಿಂತ ಹಣದ ಕಡೆ ಹೆಚ್ಚಿನ ಗಮನ ನೀಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದರು.

ಇರುವ ಎಸಿ ಹೆಚ್ಚಿನ ರೂಲ್ಸ್ ತಂದಿದ್ದು, ನಾವು ಒಳ್ಳೆ ಅಧಿಕಾರಿ ಅನಿಸಿಕೊಳ್ಳಬೇಕೆಂದು ಇಂತಹ ಕಠಿಣ ಕಾನೂನು ಬೇಡ. ಒಳ್ಳೆಯ ಅಧಿಕಾರಿ ಆಗಲಿ ನಮಗೂ ಸಂತೋಷ. ಇನ್ನೊಬ್ಬರಿಗೆ ತೊಂದರೆ ನೀಡಿ ಈ ರೀತಿ ನಡೆದುಕೊಳ್ಳುವುದು ಬೇಡ ಎಂದರು.

ವಿಐಪಿಗಳು ಬರುತ್ತಾರೆ ಎಂದು ಹಳೆ ಮನೆಯನ್ನು ಕಟೌಟ್ ಮೂಲಕ ಮುಚ್ಚಿ ಹಾಕಿದ್ದಾರೆ. ವಿಐಪಿಗಳು ಹಳೆ ಮನೆಯಲ್ಲಿ ಹುಟ್ಟು ಬೆಳೆದಿಲ್ಲವೇ? ಯಾವ ವರ್ಷವೂ ಈ ರೀತಿ ಸಮಸ್ಯೆ ಆಗಿರಲಿಲ್ಲ. ನಮ್ಮ ಮನೆಗಳಲ್ಲಿ ವಯಸ್ಸಾದವರು ಇದ್ದು, ಅವರು ಶುಗರ್ ಹಾಗೂ ಇತರೆ ಖಾಯಿಲೆಯ ಪೇಸೆಂಟ್ ಇದ್ದು, ದಿನನಿತ್ಯ ಆಸ್ಪತ್ರೆಗೆ ಹೋಗಿ ಬರಬೇಕು.

ಬಿಟ್ಟಿರುವ ಅಲ್ಪಸಲ್ಪ ಜಾಗದಲ್ಲಿ ನಾವು ಹೇಗೆ ಓಡಾಡುವದು. ಗುಂಡಿ ಬೇರೆ ಇದೆ. ಈ ಬಾರಿ ವಯಸ್ಸಾದವರಿಗೆ ನೇರ ದರ್ಶನ ಕೂಡ ಇರುವುದಿಲ್ಲ. ಅವರು ಏನು ಮಾಡಬೇಕು ಮನಸ್ಸು ಮಾಡಿದರೇ ಹಾಕಲಾಗಿರುವ ಕಟೌಟ್ ಕಿತ್ತು ಬಿಸಾಕುವುದು ಎಷ್ಟು ಸಮಯ ಬೇಕು? ನಾವು ಅಧಿಕಾರಿಗಳ ರೂಲ್ಸ್ ಫಾಲೋ ಮಾಡಲು ಸುಮ್ಮನಿದ್ದೇವೆ ಅಷ್ಟೆ. ನಮಗೆ ಮೂಲಭೂತ ಸೌಲಭ್ಯ ನೀಡಬೇಕೆಂದು ಇದೆ ವೇಳೆ ತಮ್ಮ ಅಳಲು ತೋಡಿಕೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *