
ಹಾಸನ: ಹಾಸನಾಂಬೆ ನೋಡಲು ಪ್ರತಿನಿತ್ಯ ಸಾವಿರಾರು ಜನರು ಆಗಮಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ಆಯೋಜನೆ ಮಾಡಲಾಗಿದ್ದು, ಆದರೇ ಅವರಿಗೆ ನೀಡುವ ತಿಂಡಿ ಊಟದಲ್ಲೂ ತಾರತಮ್ಯ ಮಾಡುತ್ತಿರುವ ಬಗ್ಗೆ ಅಸಮಧಾನ ವ್ಯಕ್ತವಾಗಿದೆ.
ದೇವಾಲಯದ ಬಾಗಿಲು ತೆಗೆದಾಗ ಮುಚ್ಚುವವರೆಗೂ ಪ್ರತಿವರ್ಷ ಪೊಲೀಸ್ ಸಿಬ್ಬಂದಿಗಳಿಗೆ, ಕಂದಾಯ ಇಲಾಖೆ ಸೇರಿದಂತೆ ಎಲ್ಲಾರಿಗೂ ಒಂದೆ ರೀತಿಯ ತಿಂಡಿ ಉಟವನ್ನು ನೀಡಲಾಗುತ್ತಿತ್ತು.
ಆದರೇ ಈ ವರ್ಷ ಪೊಲೀಸರಿಗೆ ಒಂದು ರೀತಿಯ ಊಟ ತಿಂಡಿ, ಇನ್ನುಳಿದ ಅಧಿಕಾರಿಗಳಿಗೆ ಮತ್ತೊಂದು ರೀತಿ ಸಿದ್ದಪಡಿಸುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಲಾಗಿದೆ.
ಮೊದಲು ಪೊಲೀಸರಿಗೆ ಯಾವ ಸೌಲಭ್ಯ ಇಲ್ಲವೆಂದು ಹೇಳಲಾಗಿತ್ತು. ನಂತರದಲ್ಲಿ ಬೇಕಾಬಿಟ್ಟಿ ರೀತಿ ಊಟ ನೀಡಲಾಗುತ್ತಿದೆ ಎಂದು ತಮ್ಮ ಹೆಸರು ಹೇಳಿಕೊಳ್ಳದೆ ತಮ್ಮ ಅಳಲು ತೋಡಿಕೊಂಡರು.


