
ಹಾಸನ: ರಾಜ್ಯದಲ್ಲಿ ತಲೆ ದೂರಿರುವ ಬರಗಾಲ ಇದ್ದರೂ ಕೂಡ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯದಲ್ಲಿ ಯಾವ ಸಮಸ್ಯೆ ಆಗದಂತೆ ಮುಂಜಾಗೃತ ಕ್ರಮವಹಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಗರದ ಹಾಸನಾಂಬೆ ದರ್ಶನದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬರಗಾಲ ಬಂದಿದ್ದು ಆದಾಗ್ಯೂ ಜನರಿಗೆ ಯಾವುದೇ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ಕಾಂಗ್ರೆಸ್ ಗ್ಯಾರಂಟಿ ಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ ಜನ ಮುಂದಿನ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಕೊಡುಗೆ ಆಧರಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಒಲವು ತೋರಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ವಿಭೀನ್ನ ಬಣದ ರಾಜಕೀಯ ಇಲ್ಲ. ಇರುವುದು ಒಂದೇ ಕಾಂಗ್ರೆಸ್ ಬಣ. ಎಸಿಸಿಸಿ ಕಾರ್ಯದರ್ಶಿ ಅವರು ಈಗಾಗಲೇ ಮಾಧ್ಯಮದ ಮುಂದೆ ರಾಜಕೀಯ ಮಾತನಾಡಬಾರದು ಎಂದು ನಿರ್ದೇಶನ ಬಂದಿದೆ ಆದುದರಿಂದ ನಾನು ಯಾವುದೇ ರಾಜಕೀಯ ಮಾತನಾಡುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕೂಡ ಎಲ್ಲಾ ಸದಸ್ಯರು ಕಾಂಗ್ರೆಸ್ ನಿಂದಾ ಗೆದ್ದು ಹೋರ ಹೊಮ್ಮಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸರ್ಕಾರ ಸುಭದ್ರವಾಗಿದೆ ಯಾವುದೇ ಯೋಚನೆ ಇಲ್ಲದೆ ಸಂಪೂರ್ಣ ೫ ವರ್ಷಗಳು ಕಾಂಗ್ರೆಸ್ ಅಧಿಕಾರ ನಡೆಸಲಿದೆ ಇಂದು ವಿಶ್ವಾಸ ವ್ಯಕ್ತಪಡಿಸಿದರು.
೧೯೪೭ ರಿಂದ ೨೦೧೪ರ ವರೆಗೆ ರಾಜ್ಯದ ಸಾಲ ೨೭೫೦ ಕೋಟಿ ಯಾಗಿತ್ತು ಆದರೆ ಕಳೆದ ಕೇವಲ ಮೂರು ವರ್ಷಗಳಲ್ಲಿ ಬಿಜೆಪಿ ೨.೫೦೦ ಕೋಟಿ ಸಾಲ ಮಾಡಿದೆ ಬಿಜೆಪಿ ಅವಧಿಯಲ್ಲಿ ರಾಜ್ಯಕ್ಕೆ ಸಾಲದ ಭಾಗ್ಯ ಬಿಟ್ಟು ಬೇರೆ ಯಾವುದೇ ಭಾಗ್ಯ ನೀಡಿಲ್ಲ ಎಂದು ವ್ಯಂಗ್ಯವಾಡಿದರು.
ಸಚಿವ ಜಮೀರ್ ಅಹಮ್ಮದ್ ಖಾನ್ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ವಾಟ್ಸಪ್ ಯೂನಿವರ್ಸಿಟಿಯಲ್ಲಿ ಹಳೆ ವೀಡಿಯೋ ಗಳನ್ನು ಕಟ್ ಮಾಡಿ ಎಡಿಟ್ ಮಾಡಿ ಆಟ ಆಡುವ ಕೆಲಸ ಮಾಡುತ್ತಾರೆ, ಅವರಿಗೆ ಬೇರೆ ಏನು ಕೆಲಸ? ಎಂದು ಕುಟುಕಿದರು.
ಸಾರಿಗೆ ಇಲಾಖೆಯಲ್ಲಿ ಈ ವರೆಗೆ ೧೩ ಸಾವಿರ ನೌಕರರು ನಿವೃತ್ತಿ ಹೊಂದಿದ್ದು ಇದೀಗ ೮.೫೦೦ ಜನ ಸಿಬ್ಬಂದಿಗಳ ನೇಮಕ ಮಾಡಲು ಸಾರಿಗೆ ಇಲಾಖೆ ಮುಂದಾಗಿದ್ದು, ಶೀಘ್ರದಲ್ಲಿಯೇ ಆಗಲಿದೆ ಎಂದು ಹೇಳಿದರು.


