ಸಕಲೇಶಪುರ : ಪಟ್ಟಣದಲ್ಲಿ ಇಂದು ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಹಾಗೂ ಶೋಷಣೆ ಅಸ್ಪೃಶ್ಯತೆ ತುಳಿತಕ್ಕೊಳಗಾಗಿರುವ ಸವಿತಾ ಸಮಾಜಕ್ಕೆ ಮೀಸಲಾತಿ ಹಾಗೂ ಜಾತಿ ನಿಂದನೆ ಕಾಯ್ದೆ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಸವಿತಾ ಸಮಾಜದ ವತಿಯಿಂದ ಶನಿವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಲಾಯಿತು .

ಈ ಸಂದರ್ಭದಲ್ಲಿ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಸೋಮಶೇಖರ್ ಮಾತನಾಡಿ ನಮ್ಮ ಸಮುದಾಯ ತಲತಲಾಂತರದಿಂದ ನಾಟಿ ವೈದ್ಯ ವೃತ್ತಿ , ಕ್ಷೌರಿಕ ವೃತ್ತಿ , ಮತ್ತು ಡೋಲು ನಾದಸ್ವರ ನುಡಿಸುವ ಈ ಮೂರು ವೃತ್ತಿಯನ್ನು ಬದುಕಿಗಾಗಿ ಮಾಡಿಕೊಂಡು ಬಂದಿದ್ದು ಈ ಮೂರು ವೃತ್ತಿಯನ್ನು ನಾವು ಸೇವಾ ಮನೋಭಾವದಿಂದ ಮಾಡಿಕೊಂಡು ಬರುತ್ತಿದ್ದು ಸ್ವಾತಂತ್ರ್ಯ ಬಂದ ಹಲವು ವರ್ಷಗಳ ನಂತರ ನಮ್ಮ ಪೂರ್ವಿಕರು ಹಳ್ಳಿಗಳಲ್ಲಿ ಕ್ಷೌರಿಕ ವೃತ್ತಿಯನ್ನು ನಿರ್ವಹಿಸಿ ದವಸ ಧಾನ್ಯಗಳು , ಆಹಾರ ಪದಾರ್ಥಗಳನ್ನು ಹಣದ ಬದಲಾಗಿ ಪಡೆದು ಜೀವನ ಸಾಗಿಸುತ್ತಿದ್ದರು

ಸ್ವತಂತ್ರ ಪೂರ್ವದಿಂದಲೂ ತೀವ್ರ ಶೋಷಣೆ ಅಸ್ಪೃಶ್ಯತೆ ಅಸಮಾನತೆಯಿಂದ ಬಳಲುತ್ತಿರುವ ಸವಿತಾ ಸಮಾಜವು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಿಂದೆ ಉಳಿದಿರುತ್ತದೆ ನಮ್ಮ ವೃತ್ತಿಯನ್ನು ನಾವು ಶ್ರೇಷ್ಠ ವೆಂದು ಭಾವಿಸಿ ವೃತ್ತಿ ಮಾಡುತ್ತಿದ್ದೇವೆ. ಸಮಾಜದಲ್ಲಿ ನಮ್ಮ ಸಮುದಾಯದ ಬಗ್ಗೆ ಜಾತಿನಿಂದನೆ ಮಾಡುವುದು ನಮ್ಮನ್ನು ಅವಮಾನಿಸುವ ರೀತಿಯಲ್ಲಿ ಕರೆಯುವುದು ಸೇರಿದಂತೆ ನಮ್ಮನ್ನು ಅವಮಾನಿಸಲಾಗುತ್ತಿದೆ.

ಹಾಗಾಗಿ ಸಾರ್ವಜನಿಕವಾಗಿ ಸವಿತಾ ಸಮಾಜದ ಬಂಧುಗಳಿಗೆ ಜಾತಿನಿಂದಲೇ ಮಾಡಿದ್ದಲ್ಲಿ ಕಾನೂನಿನಲ್ಲಿ ಶಿಕ್ಷೆಯಾಗುವ ಚಾತಿನಿಂದನೆ ದೌರ್ಜನ್ಯ ಕಾಯ್ದೆ ಜಾರಿಗೆ ತರಬೇಕು.

ಎಚ್. ಕಾಂತರಾಜು ಅವರ ಆಯೋಗ ಸರ್ಕಾರಕ್ಕೆ ವರದಿ ನೀಡಿರುವುದನ್ನು ಜಾರಿ ಮಾಡಬೇಕು ಅದಕ್ಕೆ ರಾಜಕೀಯ ಆರ್ಥಿಕ ಮತ್ತು ಶೈಕ್ಷಣಿಕ ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು.

ಸವಿತಾ ಸಮಾಜದ ಆಯೋಗವನ್ನು ರಚನೆ ಮಾಡಬೇಕು ಹೀಗೆ ಹತ್ತು ಹಲವು ಬೇಡಿಕೆಗಳನ್ನು ಹಾಗೂ ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಹೆಗಡೆ ಅವರು ವರದಿಯನ್ನು ಸಲ್ಲಿಸಿದ್ದು ಆ ವರದಿ ಆಧರಿಸಿ ಜಾತಿಯನ್ನು ಉಳಿದ ಪ್ರವರ್ಗ 2 ಎ , ಎಂಟನೇ ಕಾಲಂನಲ್ಲಿರುವ ಸವಿತಾ ಸಮೂದಾಯದ ಜಾತಿ ಪಟ್ಟಿಯಲ್ಲಿ ಸೇರಿಸಬೇಕು.

ಎಲ್ಲ ಬೇಡಿಕೆಗಳನ್ನು ಇಟ್ಟುಕೊಂಡು ನವಂಬರ್ 15 ರಂದು ಸವಿತಾ ಸಮಾಜದ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಸವಿತಾನಂದನಾಥ ಮಹಾಸ್ವಾಮೀಜಿಗಳು ಹಂಪಿಯ ವಿರೂಪಕೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ನ ವರೆಗೆ ಪಾದಯಾತ್ರೆ ನಡೆಸಿ ಫ್ರೀಡಂ ಪಾರ್ಕ್ ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡಲಿದ್ದು ರಾಜ್ಯದ ಎಲ್ಲಾ ಸವಿತಾ ಸಮುದಾಯದ ಜೊತೆಯಲ್ಲಿ ಈ ಹೋರಾಟ ನಡೆಯಲಿದ್ದು ಈ ಹೋರಾಟಕ್ಕೆ ಸಕಲೇಶಪುರ ತಾಲೂಕಿನಿಂದ ನಮ್ಮ ಸವಿತಾ ಸಮಾಜದ ಬಂಧುಗಳು ಭಾಗವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಕಾರ್ಯದರ್ಶಿ ಆನಂದ್ ಜಗದೀಶ್, ಶಬರೀಶ್, ರಾಮು, ಹಿರಿಯ ಸದಸ್ಯರಾದ ಪಳನಿ ಎಸ್ಎಂ ರಾಮು , ರಮೇಶ್ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *