
ಸಕಲೇಶಪುರ : ತಾಲ್ಲೂಕಿನ ಕ ಸ ಬಾ ಹೋಬಳಿಯ ಹೆಬ್ಬಸಾಲೆ ಹಾಗೂ ಗಾಣದಹೊಳೆಯ ಮಧ್ಯೆ ಬರುವ ವಾಟೇಗಂಡಿಯ ಬಳಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಜೀಪ್ ನ ಟ್ರ್ಯಾಲಿ ಬಿದ್ದ ಪರಿಣಾಮ ಐದು ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ವಾಟೆ ಗುಂಡಿ ಸಮೀಪ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾಟೆಗುಂಡಿ ಸಮೀಪ ಜೀಪಿನ ಟ್ರೈಲರ್ ಮಗುಚಿ ಬಿದ್ದ ಪರಿಣಾಮ ಟ್ರೈಲರ್ ನಲ್ಲಿ ಕುಳಿತಿದ್ದ 10ಜನ ಕಾರ್ಮಿಕರಲ್ಲಿ 6 ಜನಕ್ಕೆ ತೀವ್ರ ಪೆಟ್ಟು ಬಿದ್ದು ಉಳಿದ 6 ಕಾರ್ಮಿಕರನ್ನು ಹಾಸನದ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.






