ಸಕಲೇಶಪುರ : ನಗರದ ಸುಭಾಷ್ ಮೈದಾನದಲ್ಲಿ ನವೆಂಬರ್ 1ರಂದು ನೆಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜವನ್ನು ಮಾತ್ರ ಹಾರಿಸಿ ಕನ್ನಡ ಧ್ವಜ ಹಾರಿಸದೆ ತಾಲ್ಲೂಕು ಆಡಳಿತದಿಂದ ಕನ್ನಡ ದ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಾಸಕರು ಉತ್ತರಿಸಿದರು.

ನಂತರ ಮಾತನಾಡಿದ ಶಾಸಕರಾದ ಸಿಮೆಂಟ್ ಮಂಜುನಾಥ್ ನಾವು ಹುಟ್ಟಿರುವುದೇ ಕನ್ನಡ ನಾಡಿನಲ್ಲಿ ಕನ್ನಡ ಧ್ವಜ ಹಾರಿಸುವುದು ನಮ್ಮ ಕರ್ತವ್ಯ

ಸಕಲೇಶಪುರದಲ್ಲಿ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕನ್ನಡದ ಧ್ವಜ ಹಾರಿಸದೇ ಇರುವುದರ ಬಗೆ ಹಾಸನದ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ.

ನಾನು ಬೆಳಗ್ಗೆ ಆಲೂರು ತಾಲ್ಲೂಕಿನ ಕಾರ್ಯಕ್ರಮದಲ್ಲಿ ಭಾಗವಹಿಸಿ , ಆಲೂರಿನಲ್ಲಿ ಕನ್ನಡ ಧ್ವಜವನ್ನು ಹಾರಿಸಿ ಬಂದೆ ,ಸಕಲೇಶಪುರಕ್ಕೆ ಬಂದ ತಕ್ಷಣ ರಾಷ್ಟ್ರ ಧ್ವಜ ಒಂದನೇ ನೋಡಿ ಆಶ್ಚರ್ಯವಾಯಿತು ನಾನು ಶಾಸಕರಾದ ಮೇಲೆ ಇದೇ ಮೊದಲ ಬಾರಿಗೆ ನವಂಬರ್ ಒಂದರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬರುತ್ತಿದ್ದು, ಆಲೂರಿನಲ್ಲಿ ಮಾಡಿದ ಕಾರ್ಯಕ್ರಮ ಸರಿಯೋ ಸಕಲೇಶಪುರದಲ್ಲಿ ಮಾಡಿದ ಕಾರ್ಯಕ್ರಮ ಸರಿಯೋ ಎಂದು ಗೊಂದಲ ವಾಯಿತು.

ನಾವು ಹುಟ್ಟಿರುವುದೇ ಕರ್ನಾಟಕದಲ್ಲಿ ಕನ್ನಡದ ಭಾವುಟ ಆರಿಸಲು ಯಾರ ಅನುವಂತಿ ಬೇಡ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *