
ಹಾಸನ : ಮನುಷ್ಯನಾಗಿ ಹುಟ್ಟಿದ ಮೇಲೆ ಕೊನೆವರೆಗೂ ನಮ್ಮನ್ನು ಕಾಪಾಡುವ ಶಕ್ತಿ ಇದ್ದರೇ ಅದು ಶಿಕ್ಷಣದಲ್ಲಿ ಮಾತ್ರ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ತಿಳಿಸಿದರು.
ನಗರದ ವಿದ್ಯಾನಗರದ ಬೀರನಹಳ್ಳಿ ಕೆರೆ ಬಳಿ ಇರುವ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಪೂರ್ಣ ಚಂದ್ರತೇಜಸ್ವಿ ಸಾಹಿತ್ಯ ಸಂಘದಿಂದ ಹಮ್ಮಿಕೊಳಲಾಗಿದ್ದ ಕನ್ನಡ ಭಾಷಾವಸ್ತು ಪ್ರದರ್ಶನ ಮತ್ತು ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಮ್ಮನ್ನು ಕಾಪಾಡುವ ಶಕ್ತಿ ಇದೆ ಎಂದರೇ ಅದು ಶಿಕ್ಷಣಕ್ಕೆ ಮಾತ್ರ.
ಮಕ್ಕಳು ಶಾಲೆಯಿಂದ ಹೊರಗೆ ಉಳಿದರೇ ಶಿಕ್ಷಣದಿಂದ ವಂಚಿತರಾದರೇ ಮಕ್ಕಳ ಹಕ್ಕುಗಳ ಉಲ್ಲಂಘನೆ ಸಾಕಷ್ಟು ಆಗುತ್ತದೆ. ಬಾಲ್ಯ ವಿವಾಹ, ಎಳೆ ವಯಸ್ಸಿನಲ್ಲಿಯೇ ಡುಡಿಮೆಗೆ ಹಾಕುವುದು, ಮಕ್ಕಳ ಅಪಹರಣ ಮಾಡಿ ಕಳ್ಳ ಸಾಗಣಿಕೆ ಮಾಡುವುದು ಸೇರಿದಂತೆ ಹಲವಾರು ತರಹದಲ್ಲಿ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದರು.
ಶಾಲೆಯಿಂದ ಹೊರಗೆ ಬಂದಾಗ ಅಪರಾದ ಮಾಡುವವರ ಬಾಯಿಗೆ ತುತ್ತಾಗುವುದು ಹೆಚ್ಚಿನ ಅವಕಾಶ ಇರುತ್ತದೆ. ಶಾಲೆಗಿಂತ ಸುರಕ್ಷಿತವಾದ ಜಾಗ ಬೇರೆ ಎಲ್ಲು ಇರುವುದಿಲ್ಲ. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವುದು ಬೇಡ ಎಂದು ಕಿವಿಮಾತು ಹೇಳಿದರು.
ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳಿಸಬೇಕಾದರೇ ವಿದ್ಯಾಭ್ಯಾಸ ಬಹಳ ಮುಖ್ಯ. ಪ್ರಸ್ತುತದಲ್ಲಿ ಸರಕಾರಿ ಶಾಲೆಗಳು ಹೆಚ್ಚು ಅವನತಿಯತ್ತ ಸಾಗುತ್ತಿದ್ದು, ಸರಕಾರಿ ಶಾಲೆಗೆ ಮಕ್ಳಳು ಹೆಚ್ಚಿಗೆ ಬರುತ್ತಿಲ್ಲ. ಎಲ್ಲಾ ಖಾಸಗೀ ಶಾಲೆಯತ್ತ ಮುಖ ಮಾಡಿದ್ದು, ಸರಕಾರವು ಸರಕಾರಿ ಶಾಲೆಗಳಿಗೂ ಕೂಡ ಅನುಕೂಲ ಮಾಡಿಕೊಟ್ಟಿದ್ದು, ಹಿಂದಿನ ದಿನಗಳ ಹೋಲಿಕೆ ಮಾಡಿದರೇ ಇಂದು ಸರಕಾರವು ಹೆಚ್ಚಿನ ಸೌಲತ್ತುಗಳನ್ನು ನೀಡಿದೆ.
ಜ್ಞಾನ ಇರುವ ಉತ್ತಮ ಶಿಕ್ಷಕರು ಕೂಡ ಇದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ಮಕ್ಕಳೆ ನಿರ್ಮಿಸಿದ ಕನ್ನಡದ ಕೆಲಸ ವಸ್ತುಗಳು ಹಾಗೂ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಿದ ಕವಿಗಳ ಭಾವಚಿತ್ರಗಳು ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ೮ ಜನರ ಭಾವಚಿತ್ರವನ್ನು ಒಂದೊಂದು ಮಕ್ಕಳು ಒಬ್ಬಬ್ಬರ ಬಗ್ಗೆ ಪರಿಚಯ ಮಾಡಿಕೊಡುವ ಮೂಲಕ ಗಮನಸೆಳೆದರು.
ಇದೆ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೂಳಾ, ತಮ್ಮಣ್ಣಗೌಡ, ಸಾಹಿತಿ ಸುಮಾವೀಣಾ, ಸಹ ಶಿಕ್ಷಕರಾದ ಗಾಯಿತ್ರಿ, ಇಓ ಮೋಹನ್ ಕುಮಾರ್, ಮುಖ್ಯ ಶಿಕ್ಷಕ ಶಶಿಧರ್, ವಕೀಲರಾದ ಗಿರಿಜಾಂಬಿಕಾ ಇತರರು ಉಪಸ್ಥಿತರಿದ್ದರು. ಆಂಗ್ಲ ಭಾಷೆಯ ಶಿಕ್ಷಕರಾದ ಕಮಲಾಕ್ಷಿ ಸ್ವಾಗತಿಸಿದರು. ಬಿ.ಎಸ್. ವನಜಾಕ್ಷಿ ಪ್ರಾಸ್ತಾವಿಕ ನುಡಿ ನುಡಿದರು.




