ಸಕಲೇಶಪುರ :ಪಟ್ಟಣದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜವನ್ನು ಹಾರಿಸದೇ ಇರುವುದು ಖಂಡನೀಯ .ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಹ ಕನ್ನಡ ಧ್ವಜವನ್ನು ಆರಿಸಿದ್ದಾರೆ .

ಸಕಲೇಶಪುರದಲ್ಲಿ ಏಕೆ ಹಾರಿಸಲಿಲ್ಲ ಎಂದು ಗೊತ್ತಾಗುತ್ತಿಲ್ಲ

ನಾವು ಹಿಂದೆ ರಾಷ್ಟ ದ್ವಜ ಹಾರಿಸಿ ನಂತರ ಕನ್ನಡದ ಧ್ವಜ ಹಾರಿಸುವುದನ್ನು ನೋಡಿದ್ದೇವೆ ನಾವು ಈ ಹಿಂದೆ ಟಿವಿಯಲ್ಲಿ ನೋಡಿದ್ದೇವೆ .ಇದು ಶಾಸಕರ ತಪ್ಪುಅಂತ ಹೇಳಲ್ಲ ಇದು ಸಕಲೇಶಪುರ ತಾಲ್ಲೂಕು ಆಡಳಿತ ಅಧಿಕಾರಿಗಳ ತಪ್ಪು ಅವರು ಸಂಬಳ ತೆಗೆದುಕೊಂಡು ಸರಿಯಾದ ರೀತಿಯಲ್ಲಿ ನಿಯಮ ಪಾಲನೆ ಮಾಡುವಲ್ಲಿ ವಿಫಲವಾಗಿದ್ದು ಸೌಜನ್ಯಕ್ಕಾದರು ಕನ್ನಡ ರಾಜ್ಯೋತ್ಸವ ದಿನ ನಮ್ಮ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರನ್ನು ಮಾತನಾಡಲು ಅವಕಾಶ ನೀಡದೆ ಇರುವುದು ಅಕ್ಷಮ್ಯ ಅಪರಾದ.

ಅಧಿಕಾರಿಗಳು ಅವರ ಮನಸ್ಸಿಗೆ ಬಂದ ರೀತಿಯಲ್ಲಿ ಮಾಡಿದ್ದಾರೆ, ಹಾಗೂ ತಾಲ್ಲೂಕಿನ ರಾಜ್ಯೋತ್ಸವ ದಿನ ಮೂರು ಜನರಿಗೆ ಸನ್ಮಾನ ಮಾಡಿದರು , ಆ ಸನ್ಮಾನದಲ್ಲಿ ಸಹ ಗೊಂದಲವಾಗಿದೆ ಇದು ಸಕಲೇಶಪುರ ತಾಲೂಕು ಆಡಳಿತದ ವೈಫಲ್ಯವನ್ನು ತೋರುತ್ತದೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *