ಸಕಲೇಶಪುರ :-ಚಾಮುಂಡೇಶ್ವರಿ ಕ್ರೀಡಾಂಗಣ ಮೈಸೂರು ನಲ್ಲಿ ನೆಡೆದ ರಾಜ್ಯಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಎಲ್ ವಿ ಪಾಲಿಟೆಕ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಕಬ್ಬಡ್ಡಿ ಸ್ಪರ್ಧೆಯಲ್ಲಿ ಜಿಲ್ಲೆಯ ಹೆಸರನ್ನು ರಾಜ್ಯಮಟ್ಟಕ್ಕೆ ತಲುಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ .

ಈ ತಂಡದಲ್ಲಿ ಹೆತ್ತೂರಿನ ಗುರುಸ್ವಾಮಿ ಪ್ರಕಾಶ್ ಅವರ ಪುತ್ರ ಜಗತ್ ಗೌಡ ಪಾಲ್ಗೊಳ್ಳುವ ಮೂಲಕ ಊರಿಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದುಕೊಟ್ಟಿದಾರೆ.

ಜಗತ್ ಗೌಡರ ಸ್ಥಳೀಯ ಕಬ್ಬಡಿ ಪಂದ್ಯಾವಳಿಗಳಲ್ಲಿ ಆಡುವುದರೊಂದಿಗೆ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಈಗಾ ತಾವು ಓದುತ್ತಿದ್ದ ಹಾಸನದ ಎಲ್ ವಿ ಪಾಲಿಟೆಕ್ ಕಾಲೇಜಿನಿಂದ ಪ್ರತಿನಿಧಿಸಿ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಆಡುವ ಮೂಲಕ ಕಾಲೇಜಿಗೆ ಹಾಗೂ ಹುಟ್ಟು ಊರಿಗೆ ಕೀರ್ತಿ ತಂದಿದ್ದಾರೆ.

ಇದರಿಂದ ಸಂತೋಷಗೊಂಡ ಹೆತ್ತೂರಿನ ಹೋಬಳಿಯ ಜನರು ಜಗತ್ ಗೌಡರಿಗೆ ಪ್ರಶಾಂಸೆ ಜೊತೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *