
ಹಾಸನ: ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಪುರಾತನ ವಸ್ತುಗಳು, ಕೀಟಗಳ ಸಂಗ್ರಹ, ಪುಸ್ತಕ ವಸ್ತು ಪ್ರದರ್ಶನವನ್ನು ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವೀಕ್ಷಣೆ ಮಾಡಿ ಮೆಚ್ಚುಗೆವ್ಯಕ್ತಪಡಿಸಿ ಯಶಸ್ವಿಗೊಳಿಸಿದರು.
ಇದೆ ವೇಳೆ ಕಾರ್ಯಕ್ರಮದ ಸಂಯೋಜಕ ಮೂಡಿಗೆರೆಯ ಬಿ.ಕೆ. ಧನಂಜಯ ಜೀವಾಳ ಅವರು ಮಾಧ್ಯಮದೊಂದಿಗೆ ಮಾತನಾಡಿ, ತೋಟಗಾರಿಕಾ ಮಹಾ ವಿದ್ಯಾಲಯ ಮೂಡಿಗೆರೆ, ಗೆಳೆಯರ ಬಳಗ, ನೇಚರ್ ಕ್ಲಬ್ ಪ್ರತಿಷ್ಠಾನ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಮಲೆನಾಡು ಜನಪರ ಹೋರಾಟ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಚನ್ನಪಟ್ಟದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಪುರಾತನ ವಸ್ತುಗಳ, ಕೀಟಗಳ ಸಂಗ್ರಹ, ಪುಸ್ತಕ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಕ್ರಿಶ್ತ ಪೂರ್ವದಿಂದ ಹಿಡಿದು ಇಲ್ಲಿಯವರೆಗೂ ಎರಡನೇ ಮಹಾ ಯುದ್ಧದವರೆಗೂ ಬಳಕೆಯಾದಂತಹ ಪಾರಂಪರಿಕ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ವಿಸ್ಮಯಕಾರಿ ಕೀಟ ಜಗತ್ತನ್ನು ಪ್ರತಿನಿಧಿಸುವ ಕೀಡ ಪ್ರಭೇದಗಳ ಪ್ರಾತ್ಯಕ್ಷತೆಯನ್ನು ಕೂಡ ಇಟ್ಟುಕೊಳ್ಳಲಾಗಿದ್ದು, ಕೀಟ ವಿಸ್ಮಯ ಪೂರ್ವ ಕೀಟಗಳ ಸಂಗ್ರಹದ ಅನಾವರಣದಲ್ಲಿ ೨೦ ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಕೀಟಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಹಾಗೂ ಜಾಗತೀಕವಾಗಿ ಪ್ರಕಾಶಮಾನ ಮಾಡುವಂತಹ ಪುಸ್ತಕಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಪುಸ್ತಕಗಳ ಬಗ್ಗೆ ಹೆಚ್ಚಿ ಪ್ರೀತಿ ಬೆಳೆಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಗೆಳೆಯರ ಬಳಗ ಮಾಡಿರುವಂತಹ ಮೂರನೇ ಪ್ರಯತ್ನವಾಗಿದೆ. ತೋಟಗಾರಿಕ ಕಾಲೇಜು ಮೂಡಿಗೆರೆ ಇಲ್ಲಿ ಅವರ ಶಿಕ್ಷಣದಲ್ಲಿ ಸಂಗ್ರಹ ಮಾಡಿದ ವಿಶಿಷ್ಟ ಕೀಟಗಳನ್ನು ಉಳಿಸಿಕೊಂಡ ಸಂಗ್ರಹವನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ನಮ್ಮ ಪರಂಪರೆ, ಪುರಾತನ ವಸ್ತುಗಳು, ವಿಸ್ಮಯ ಕೀಟ ಹಾಗು ಚಿಟ್ಟೆಗಳು ಹಾಗು ಪುಸ್ತಕಗಳು ನಮ್ಮ ಜೀವನಕ್ಕೆ ಸದಾ ಹತ್ತಿರ, ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ಪುರಾತನ ವಸ್ತುಗಳನ್ನು ಸಂಗ್ರಹ ಮಾಡಿರುವ ಮಾಜಿ ಸೈನಿಕರು ಹಾಗೂ ವಕೀಲರಾದ ಅಶೋಕ್ ಮಾತನಾಡುತ್ತಾ, ಪುರಾತನ ವಸ್ತುಗಳನ್ನು ಒಂದು ಸೂರಿನಡಿ ನೋಡಲು ಅವಕಾಶ ಕಲ್ಪಿಸಲಾಗಿದೆ.
ಕ್ರಿಶ್ತ ಪೂರ್ವ ೫೦೦ನೇ ಇಸವಿಯಿಂದ ಹಿಡಿದು ಇಲ್ಲಿಯವರೆಗೂ ನಾಣ್ಯಗಳು ಕಾಣಬಹುದು, ಮಲೆನಾಡಿನ ಗೃಹ ಬಳಕೆಯ ಅಪುರೂಪದ ವಸ್ತುಗಳು ಹಾಗೂ ಕಣ್ಮರೆಯಾಗಿರುವ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ ಎಂದರು. ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್, ಹಸಿರು ಭೂಮಿ ಪ್ರತಿಷ್ಠಾನದ ಗಿರಿಜಾಂಬಿಕ, ಆಡಿಟರ್ ದಿನೇಶ್ ಕುಮಾರ್, ಪ್ರಗತಿಪರ ರೈತ ಯೋಗೀಶಪ್ಪ, ಶಿವಕುಮಾರ್ ಇತರರು ಉಪಸ್ಥಿತರಿದ್ದರು.



