ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದ ಮುಖ್ಯಧ್ವಾರದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಸನ ಪ್ರಾದೇಶಿಕ ಕಚೇರಿಯಿಂದ ಈ ದಿವಸ ವಿಚಕ್ಷಣ ಜಾಗೃತಿ ಸಪ್ತಾಹದಡಿ ಉಚಿತ ಅರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಹಾಸನ ಒಬೆಸಿಟಿ ಮತ್ತು ಡೈಯಾಬಿಟಿಕ್ ಸೆಂಟರ್ ವತಿಯಿಂದ ಸುಮಾರು ೧೦೦ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೊಂಡರು.

ಭ್ರಷ್ಟಾಚಾರ ನಿರ್ಮೂಲನೆಗಾಗಿ ನಾವೆಲ್ಲರೂ ಕೈ ಜೋಡಿಸೋಣ, ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶ ಮಾಡಲು ಎಲ್ಲರು ಶ್ರಮಿಸೋಣವೆಂದು ಇದೆ ವೇಳೆ ಕರೆಕೊಟ್ಟರು.

ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ವಲಯಧಿಕಾರಿ ಕೆ.ಎಸ್. ಮೂರ್ತಿ, ಉಪ ಪ್ರಾದೇಶಿಕ ಅಧಿಕಾರಿ ರಾಜೇಶ್ ಎಂ, ಲೋಕೇಶ್ ಜಿ.ಟಿ. ಜಯಚಂದ್ರ ಎ.ವಿ. ರಮೇಶ್ ಬಾಬು, ಸಿ. ಅರುಣ್ ಕುಮಾರ್, ಹಾಗೂ ಇತರ ಸಿಬ್ಬಂದಿವರ್ಗದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *