
ಹಾಸನ : ಹಾಸನಾಂಬ ದರ್ಶನಕ್ಕೆಂದು ಬಂದಿದ್ದ 76 ರ ಅಜ್ಜಿಯ ಪ್ಯಾರಾಗ್ಲೈಡಿಂಗ್ ಸಾಹಸ ನೋಡಿ ಸಾರ್ವಜನಿಕರು ಅಚ್ಚರಿಗೊಂಡಿದ್ದಲ್ಲದೇ ದಿಗ್ಬ್ರಮೆಗೊಂಡು ವೀಕ್ಷಣೆ ಮಾಡಿದರು.
ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಅದಿ ದೇವತೆ ಹಾಸನಾಂಬೆ ದರ್ಶನ ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು, ತಾಯಿ ದರ್ಶನಕ್ಕೆಂದು ಬಂದಿದ್ದ ವೃದ್ಧೆ ದರ್ಶನದ ನಂತರ ಸಾಹಸ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಯುವಕ-ಯುವತಿಯರಿಗೆ ನಾನೇನು ಕಡಿಮೆ ಇಲ್ಲ ಎನ್ನುವಂತೆ ಬೂವನಹಳ್ಳಿ ಏರ್ ಪೋರ್ಟ್ ನಲ್ಲಿ ನಡೆಯುತ್ತಿರುವ ಪ್ಯಾರಾಗ್ಲೈಡಿಂಗ್ ನಲ್ಲಿ ಪಾಲ್ಗೊಳ್ಳುವ ಮೂಲಕ ಒಂದು ರೀತಿ ಅಚ್ಚರಿ ಮೂಡಿಸಿದ್ದಾರೆ.
ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್ ನಲ್ಲಿ ಅನೇಕ ಯುವಕ, ಯುವತಿಯರು ಭಾಗವಹಿಸುವುದು ಸಾಮಾನ್ಯ ಆದರೇ ಇಲ್ಲಿ 76 ವರ್ಷದ ಅಜ್ಜಿ ಕೂಡ ಪ್ಯಾರಾಗ್ಲೈಡಿಂಗ್ ಮಾಡಿ ನೋಡುಗರ ಗಮನ ಸೆಳೆದಿದ್ದಾರೆ.ಬೆಂಗಳೂರು ಮೂಲದ ಅಜ್ಜಿಯ ಸಾಹಸ ಕ್ರೀಡೆಗೆ ಜನರು ಬೆರಗಾಗಿದ್ದಾರೆ.



