
ಸಕಲೇಶಪುರ : ಇತ್ತೀಚೆಗೆ ಹೆಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ ಕಾಂಗ್ರೆಸ್ ಮುಖಂಡ ಮಸ್ತಾರೆ ಲೋಕೇಶ್ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ನಾನು 26 ವರ್ಷಗಳಿಂದ ಸಕ್ರೀಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತ ಬಂದೆ ಆದರೆ ಕಾಂಗ್ರೆಸ್ ಪಕ್ಷದಲ್ಲಿರುವ ಸ್ವಜನ ಪಕ್ಷ ಪಾತ , ಒಳ ರಾಜಕಾರಣದಿಂದ ಬೇಸತ್ತು ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡ ,ಹೆಚ್.ಡಿ.ಕುಮಾರಣ್ಣ ,ಹೆಚ್.ಡಿ.ರೇವಣ್ಣ ಅವರ ಕಾರ್ಯಕ್ರಮಗಳನ್ನು ಮೆಚ್ಚಿ ಹಾಗೂ ಜೆಡಿಎಸ್ ಪಕ್ಷದ ಸಿದ್ದಾಂತಗಳು ಜನಪರವಾಗಿದ್ದು ಈ ಕ್ಷೇತ್ರದ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಎಲ್ಲ. ವರ್ಗದವರನ್ನು ಆತ್ಮೀಯವಾಗಿ ಕಾಣುವ ಇವರಿಗೆ ಕ್ಷೇತ್ರದ ಜನತೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಗೆಲ್ಲಿಸಬೇಕು ಎಂದರು ಈಪ್ರಚಾರ ಕಾರ್ಯದಲ್ಲಿ ಪುರಸಭೆಯ ಅಧ್ಯಕ್ಷ ಕಾಡಪ್ಪ ,ಸದಸ್ಯರಾದ ಎಸ್.ಡಿ.ಆದರ್ಶ್, ಯಾದ್ ಗಾರ್ ಇಬ್ರಾಹಿಂ ,ಇಸ್ರಾರ್,ಜ್ಯೋತಿ ರಾಜಕುಮಾರ್ ,ಸರಿತಾ ಗಿರೀಶ್, ವರಲಕ್ಷ್ಮಿ, ಮೋಹನ್ ,ವಿದ್ಯಾ ಪ್ರಭಾಕರ್ ,ಇತರರು ಇದ್ದರು.
*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*
