ಸಕಲೇಶಪುರ ಪಟ್ಟಣದ ಚಂಪಕನಗರ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಹೆಚ್ ಕೆ ಕುಮಾರಸ್ವಾಮಿ ಅವರ ಜೊತೆ ಮತಯಾಚನೆ ಮಾಡಿದ ನಾರ್ವೆ ಸೋಮಶೇಖರ್ .
ಈ ಸಂದರ್ಭದಲ್ಲಿ ನಾರ್ವೆ ಸೋಮಶೇಖರ್ ಮಾತನಾಡಿ ಸಕಲೇಶಪುರದಲ್ಲಿ ಹೆಚ್ ಕೆ ಕುಮಾರಸ್ವಾಮಿಯವರು ಶಾಸಕರು ಆಗುವುದು ನಿಶ್ಚಿತ ಹಾಗೆ ಮಂತ್ರಿಯಾಗುವುದು ನಿಶ್ಚಿತ.
ನಾನು ಸಕಲೇಶಪುರ ಆಲೂರು ಕಟ್ಟಾಯದ ಎಲ್ಲಾ ಭಾಗಗಳಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ಹೆಚ್ ಕೆ ಕುಮಾರಸ್ವಾಮಿ ಅವರ ಬಗ್ಗೆ ಒಳ್ಳೆಯ ಒಲವಿದ್ದು ನಾನು ಪಕ್ಷ ಸೇರ್ಪಡೆಯಾದ ದಿನದಿಂದ ಮತದಾರರ ಬಳಿ ತೆರಳಿ ಕುಮಾರಸ್ವಾಮಿಯವರನ್ನು ಗೆಲ್ಲಿಸುವಂತೆ ಕೇಳಿಕೊಳ್ಳುತ್ತಿದ್ದೆನೆ ಇವರು 25000ಕೂ ಅಧಿಕ ಮತಗಳ ಅಂತರದಲಿ ಗೆಲುವು ಸಾಧಿಸಿದ್ದಾರೆ ಎಂದು ನಾರ್ವೆ ಸೋಮಶೇಖರ್ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಕೆ ಎಲ್ ಸೋಮಶೇಖರ್, ಹೆತ್ತೂರು ವಿಜಯಕುಮಾರ್, ಕ್ಯಾನಹಳ್ಳಿ ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ಸತೀಶ್, ಪುರಸಭೆ ಸದಸ್ಯರುಗಳಾದ ಆದರ್ಶ, ಪ್ರಜ್ವಲ್,ಇಸ್ರಾರ್, ಇಬ್ರಾಹಿಂ, ಸಮೀರ್,ಪುರಸಭೆ ಅಧ್ಯಕ್ಷ ಕಾಡಪ್ಪ, ಜೆಡಿಎಸ್ ಮುಖಂಡರುಗಳಾದ ಎಸ್ ಎಸ್ ಅಸ್ಲಾಂ, ಸ ಬ ಭಾಸ್ಕರ್, ಪ್ರದೀಪ್, ನಿಷ್ಮೀತ ರವಿಕುಮಾರ, ಅವಿನಾಶ್, ವಿಜಯಕುಮಾರ್, ಸಂದೇಶ ಇತರರು ಇದ್ದರು.

*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *