
ಹಾಸನ: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರು ಆಯ್ಕೆಗೊಂಡ ಹಿನ್ನಲೆಯಲ್ಲಿ ನಗರದ ಹೇಮಾವತಿ ಪ್ರತಿಮೆ ಮುಂಬಾಗ ಮಾಜಿ ಶಾಸಕ ಪ್ರೀತಂ ಜೆ. ಗೌಡ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ತಿನಿಸುವ ಮೂಲಕ ಸಂಭ್ರಮಿಸಿದರು.
ನಂತರ ಉದ್ದೇಶಿಸಿ ಮಾತನಾಡಿದ ಪ್ರೀತಂಗೌಡ ಅವರು, ಬಿಜೆಪಿ ಕಾರ್ಯಕರ್ತರಿಗೆ ಹೊಸ ಉತ್ಸಹ ಹುಮ್ಮಸ್ಸು ಮತ್ತು ಬಲವಾದ ನಂಬಿಕೆ ಇದ್ದು, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ೨೮ಕ್ಕೆ ೨೮ ಗೆಲುವು ಸಾಧಿಸುವುದಕ್ಕೆ ಮತ್ತು ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ೧೫೦ಕ್ಕೂ ಹೆಚ್ಚು ಸ್ಥಾನಗಳ ಪಡೆಯುವುದಕ್ಕೆ ಬಿಜೆಪಿ ಪಾರ್ಟಿಯ ನೇತೃತ್ವವನ್ನು ಒಬ್ಬ ಯುವ ನೇತರರು, ಯುವಕರ ಆಶಾಕಿರಣ ಹಾಗೂ ಲಕ್ಷಾಂತರ ಯುವಕರ ಕಣ್ಮಣಿ ಆಗಿರುವಂತಹ ವಿಜಯೇಂದ್ರ ಅವರಿಗೆ ರಾಷ್ಟ್ರೀಯ ಮತ್ತು ರಾಜ್ಯದ ಹಿರಿಯ ನಾಯಕರು ಎಲ್ಲಾ ಸೇರಿ ರಾಜ್ಯಾಧ್ಯಕ್ಷರಾಗಿ ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಅವಕಾಶವನ್ನು ಯಶಸ್ವಿಯಾಗಿ ನಿರ್ವಹಿಸಲಿ ಎಂದು ತಾಯಿ ಹಾಸನಾಂಬೆಯಲ್ಲಿ ಪ್ರಾರ್ಥನೆಯನ್ನು ಮಾಡಲಾಗಿದೆ.
ಅವರ ಜೊತೆ ಎಲ್ಲಾರು ದುಡಿಯೋಣ ಎಂದು ಶುಭ ಹಾರೈಸಿದರು.
ಇದೆ ವೇಳೆ ಬಿಜೆಪಿ ಮುಖಂಡರಾದ ನವೀಲೆ ಅಣ್ಣಪ್ಪ, ಈಶ್ವರ್, ವೇಣುಗೋಪಾಲ್, ಶೋಬನ್ ಬಾಬು, ಪ್ರೀತಿವರ್ಧನ್, ವೇಧವತಿ, ರತ್ನ, ರಾಹುಲ್ ಕಿಣಿ, ಶಂಕರೇಗೌಡ ಇತರರು ಉಪಸ್ಥಿತರಿದ್ದರು.


