
ಸಕಲೇಶಪುರ : ತಾಲ್ಲೂಕಿನ ಶುಕ್ರವಾರಸಂತೆಯ ಕುರುಬತ್ತೂರು ಗ್ರಾಮದಲ್ಲಿ ಆಸ್ಪತ್ರೆ ಪಕ್ಕದ ಸರ್ಕಾರಿ ಸರ್ವೆ ನಂಬರ್ 24 ಬೀಳು ಜಾಗವು 70 ವರ್ಷದ ದಿಂದ ಖಾಲಿ ಇದ್ದು,ಈ ಜಾಗದಲ್ಲಿ ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ಮಣ್ಣು ತೆಗೆದು ನಿವೇಶನವನ್ನು ಅಕ್ರಮವಾಗಿ ಒತ್ತುವರಿ ಮಾಡಲು ಪ್ರಯತ್ನಿಸುತ್ತಿದ್ದರು .
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪೋಲಿಸ್ ಇಲಾಖೆಯ ಮುಖಾಂತರ ಅಕ್ರಮ ಮಣ್ಣು ತೆಗೆಯುವುದನ್ನು ನಿಲ್ಲಿಸಿ.ಈ ಜಾಗವು ಕಂದಾಯ ಇಲಾಖೆಗೆ ಸೇರ್ಪಟ್ಟಿದ್ದು . ಈ ಜಾಗವನ್ನು ಕುಲ್ಲ ಮಾಡಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಮೀಸಲಿಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು .
ಸಂಬಂಧಪಟ್ಟ ಅಧಿಕಾರಿಗಳು ಅಕ್ರಮವಾಗಿ ಸದರಿ ಜಾಗವನ್ನು ಕಬಳಿಸಲು ಯತ್ನಿಸಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರ ಒತ್ತಾಯಿಸಿದರು.




