*ಜೀವತಂದ ಜೀವಾಮೃತ*ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಜೀವಮೃತ* ಪದ್ಧತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮನ್ನು ಹಮ್ಮಿಕೊಂಡಿದ್ದರು .

ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಣುಜೀವಿಗಳ ಬೆಳವಣಿಗೆಗೆ ಸಹಕಾರಿಯಾಗುವಂತಹ ಜೀವಾಮೃತ ತಯಾರಿಕ ವಿಧಾನವನ್ನು ವಿದ್ಯಾರ್ಥಿಗಳು ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ಹಳ್ಳಿಯ ಜನರಿಗೆ ವಿವರಿಸಿದರು.

ಕಚ್ಚಾವಸ್ತುಗಳಾದ ನೀರು, ಸಗಣಿ, ಗಂಜಲ, ಕಪ್ಪು ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು ಹಾಗೂ ಕೆಂಪು ಮಣ್ಣು ಬೇಕಾಗಿದ್ದು,50ಲೀ. ನೀರಿಗೆ 2.5 ಕೆ.ಜಿ ಸಗಣಿ,2.5ಲೀ. ಗಂಜಲ,500ಗ್ರಾಂ ಬೆಲ್ಲ,500ಗ್ರಾಂ ಹಿಟ್ಟು ಹಾಗೂ 1 ರಿಂದ 2 ಹಿಡಿ ಕೆಂಪು ಮಣ್ಣನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಮಿಶ್ರಣವನ್ನು 7 ರಿಂದ 11 ದಿನಗಳ ಕಾಲ ನೆರಳಲ್ಲಿ ಇಟ್ಟು ದಿನಕ್ಕೆ 2 ಬಾರಿಯಂತೆ ವೃತ್ತಾಕಾರವಾಗಿ ಕೋಲಿನಿಂದ ತಿರುಗಿಸಬೇಕು.

ಮಣ್ಣಿನಲ್ಲಿ ತೇವಾ0ಶವಿರುವ ಸಮಯದಲ್ಲಿ ಬಹುವಾರ್ಷಿಕ ಬೆಳೆಗಳಿಗೆ 2 ಅಡಿ ಅಂತರದಲ್ಲಿ ಹಾಗೂ ಅಲ್ಪವಧಿ ಬೆಳೆಗಳಿಗೆ ಸಾಲುಗಳ ಮಧ್ಯೆ ಹಾಕಬೇಕು. ಇದರಿಂದಾಗಿ ಮಣ್ಣಿನ ಸೂಕ್ಷ್ಮಜೀವಿಗಳ ಸಂಖ್ಯೆ ದ್ವಿಗುಣಗೊಂಡು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಡಾ||ಎಸ್.ಟಿ.ಭೈರಪ್ಪನವರ್ ಪ್ರಾಧ್ಯಪಕರು ಬೇಸಾಯ ಶಾಸ್ತ್ರ ವಿಭಾಗ ಹಾಗೂ ಗ್ರಾಮಸ್ಥರಾದ ಬೋರೇಗೌಡ, ಮಾರೇಗೌಡ, ಶಿವೇಗೌಡ, ಚಂದ್ರಣ್ಣ ಮುಂತಾದವರು ಪಾಲ್ಗೊಂಡಿದ್ದರು.ನಂತರ ಮಾತನಾಡಿದ ಡಾ|| ಎಸ್.ಟಿ. ಭೈರಪ್ಪನವರ್ ಅವರು ಜೀವಾಮೃತದ ಮಹತ್ವ ಮತ್ತು ವಿಧಾನದ ಬಗ್ಗೆ ತಿಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *