
ಸಕಲೇಶಪುರ : ತಾಲೂಕು ಬೆಳಗೋಡು ಹೋಬಳಿ ಹೊಸಕೊಪ್ಪಲು ಗ್ರಾಮದ ಕೃಷಿಕರಾದ ಸೋಮೇಗೌಡ ಮತ್ತು ಚಂದ್ರೇಗೌಡ ಮತ್ತು ಸುಶೀಲಮ್ಮ ಮತ್ತು ತಮ್ಮಯ್ಯ ಅವರ ಕಾಫಿ ತೋಟದಲ್ಲಿ ಕಾಡಾನೆಗಳು ಸಂಪೂರ್ಣ ಕಾಫಿ ಮತ್ತು ಅಡಿಕೆ ಗಿಡಗಳನ್ನು ತುಳಿದು ಭತ್ತದ ಗದ್ದೆಯನ್ನು ಹಾಳು ಮಾಡಿವೆ.
ಸಂಬಂಧಪಟ್ಟ ಅರಣ್ಯ ಇಲಾಖೆಯವರಿಗೆ ಎಷ್ಟು ಮನವಿ ಮಾಡಿದರೂ ಕೂಡ ರೈತರ ಕಷ್ಟಕ್ಕೆ ಯಾವುದೇ ಅಧಿಕಾರಿಗಳು ರೈತರ ಕಷ್ಟಾನ ಕೇಳೋರಿಲ್ಲ ಮತ್ತು ಕಾಡಾನೆ ಸಮಸ್ಯೆಯನ್ನು ಬಗೆಹರಿಸಲಿಲ್ಲ.
ಸಕಲೇಶಪುರಅರಣ್ಯ ಇಲಾಖೆಗೆ ಎಷ್ಟೇ ಮನವಿ ಮಾಡಿದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಲ್ಲ ಈ ಕೂಡಲೇ ರೈತರ ಕಷ್ಟಕ್ಕೆ ಅಧಿಕಾರಿಗಳು ದೌಡಾಯಿಸಬೇಕಾಗಿ ನಿಮ್ಮಲ್ಲಿ ಕಳಕಳಿಯ ವಿನಂತಿ ನಾಗೇಂದ್ರ ಹೊಸಕೊಪ್ಪಲು ಅವರ ಮನವಿ





