ಹಾಸನ: ಜಮೀನು ದುರಸ್ಥಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಯಾರು ಅರ್ಜಿ ಸಲ್ಲಿಸುವುದು ಬೇಡ. ಸರಕಾರದ ಸೂಚನೆಯಂತೆ ನಾವೆ ದುರಸ್ತಿ ಮಾಡಿಕೊಡಲಾಗುವುದು. ಇನ್ನು ಹೆಚ್.ಆರ್.ಪಿ. ಹಗರಣದ ವಿಚಾರದಲ್ಲಿ ಅನರ್ಹರಿಗೆ ಹಂಚಿರುವ ಬಗ್ಗೆ ನಿಗಾವಹಿಸಿ ಕ್ರಮದ ಬಗ್ಗೆ ಡಿಸಿಗೆ ಸೂಚನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೃಷ್ಣ ಬೈರೇಗೌಡ ತಿಳಿಸಿದರು.

ನಗರದ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆಗೆ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಂಡಿದ್ದೆನೆ. ಈಗಾಗಲೇ ದಾರಿ ಮಾರ್ಗ ಬರುವಾಗ ದಂಡಿಗನಹಳ್ಳಿ ಹೊಬಳಿ ಉದಯಪುರ ಆರ್.ಐ. ಕಛೇರಿಗೆ ಭೇಟಿ ಮಾಡಿ ಕಡತಗಳನ್ನು ಪರಿಶೀಲನೆ ಮಾಡಿದ್ದೆನೆ. ಬರಗಾಲದ ಕಾರಣ ಸರ್ಕಾರದ ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖಗಳ ಚುರುಕು ಮುಟ್ಟುವ ಕೆಲಸವನ್ನು ಮಾಡುತ್ತಿದ್ದನೆ. ಕಂದಾಯ ಇಲಾಖೆಯಲ್ಲಿ ಜನರ ಕೆಲಸಗಳಾದ ಸರ್ವೆ ಪೋಡಿ ಆಗದೆ ಉಳಿದಿದ್ದು, ಅವುಗಳನ್ನು ಕಾಲಮಿತಿಯಲ್ಲಿ ಮಾಡುವ ಬಗ್ಗೆ ಸಮಸ್ಯೆಗಳಿಗೆ ಪರಿಹಾರ ಮಾಡಲಾಗುವುದು.

ದಿನ ನಿತ್ಯ ಸಾರ್ವಜನಿಕರು ರೈತರು ತಮ್ಮ ಕಾರ್ಯ ಕೆಲಸವನ್ನು ಬಿಟ್ಟು ತಾಲ್ಲೂಕು ಕಛೇರಿ. ಎಸಿ ಕಛೇರಿ ಆಲೆಯುತ್ತಿದ್ದಾರೆ. ಇವುಗಳನ್ನು ಕಡಿಮೆ ಮಾಡಲು ಮಾನ್ಯ ಮುಖ್ಯಮಂತ್ರಿಯವರು ನನಗೆ ಸೂಚನೆ ನೀಡಿದ್ದಾರೆ. ೫ ವರ್ಷಗಳ ಹಳೆಯ ಭೂ ನ್ಯಾಯಲಯದ ಕೆಸ್ ಗಳನ್ನು ಶೀಘ್ರ ವಿಲೆವಾರಿ ಮಾಡಿಸುತ್ತಿದ್ದೆವೆ. ಜಿಲ್ಲಾಧಿಕಾರಿ ನ್ಯಾಯಲಯ, ಎಸಿ ನ್ಯಾಯಲಯ, ತಹಶಿಲ್ದಾರರ ನ್ಯಾಯಲಯದಲ್ಲಿ ಬಾಕಿ ಇರುವ ಕೋರ್ಟ್ ಪ್ರಕರಣಗಳನ್ನು ನವಂಬರ್ ಅಂತ್ಯದೋಳಗೆ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ.

ನಾನು ಹೇಳಿದ ಕೂಡಲೆ ಅಧಿಕಾರಿಗಳು ಮಾಡುವುದಿಲ್ಲ. ನಾವು ಅಧಿಕಾರಿಗಳ ಬೆನ್ನು ಹತ್ತಿ ಕೆಲಸ ಮಾಡಿಸುತ್ತೆವೆ. ನಾನು ಈಗಾಗಲೇ ೨೦ ಜಿಲ್ಲೆಯ ಪ್ರವಾಸ ಮಾಡಿದ್ದೆನೆ ಎಂದರು.

ಎಚ್.ಆರ್.ಪಿ. ಹಗರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಪುನರ್ವಸತಿ ಯೋಜನೆ ಅಡಿ ಜಮೀನು ಹಂಚುವ ವಿಚಾರ ಅನರ್ಹರಿಗೆ ಹಂಚಿರುವ ಬಗ್ಗೆ ನಮ್ಮ ಇಲಾಖೆ ಕಂದಾಯ ಇಲಾಖೆ ಮಾಡುವ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೆನೆ. ಪಕ್ಕದ ಕಡೂರು ಮೂಡಿಗೆರೆ ತಾಲೂಕಿನಲ್ಲಿ ೬ ಸಾವಿರ ಎಕರೆ ಭೂಮಿ ನಕಲಿ ಬೊಗಸ್ ಆಗಿರುವ ಜಮೀನನ್ನು ರದ್ದತಿ ಮಾಡಿದ್ದೆವೆ. ಯಾರು ಅಧಿಕಾರಿ ಗ್ರಾಂಟ್ ಮಾಡಿದ್ದರು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದೆವೆ.

ಹೇಮಾವತಿ ಜಲಾಶಯ ಭೂ ಸಂತ್ರಸ್ತ ಜಮೀನು ಹಗರಣ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದೆ ಇದ್ದಂತಹ ಸರ್ಕಾರ ಮಾಡಬೇಕಾದ ಕೆಲಸ ನನ್ನನ್ನು ಕೇಳುತ್ತಿದ್ದಿರಿ ಎಂದು ಹೇಳಿದರು. ನಿಯಮದ ಪ್ರಕಾರ, ತಹಶೀಲ್ದಾರ್‌ಗಳ ಮುಂದೆ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳನ್ನು ೯೦ ದಿನಗಳಲ್ಲಿ ತೆರವುಗೊಳಿಸಬೇಕು. ಆದರೆ ಐದು ವರ್ಷಗಳಿಂದ ಹಲವು ಪ್ರಕರಣಗಳು ಬಾಕಿ ಉಳಿದಿವೆ. ತಹಶೀಲ್ದಾರ್, ಎಸಿ ಸೇರಿದಂತೆ ಕಂದಾಯ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಇವೆ. ಜನವರಿಯೊಳಗೆ ಪ್ರಕರಣಗಳನ್ನು ತಹಶಿಲ್ದಾರರ ರವರ ಹಂತದಲ್ಲಿ ೧೫೮ ಕೇಸ್ ೫ ವರ್ಷದಿಂದ ಬಾಕಿ ಇದ್ದವು. ೯೦ ದಿನಗಳೊಳಗೆ ತಹಶಿಲ್ದಾರರ ಲೆವಲ್ ನಲ್ಲಿ ಇರುವ ಪ್ರಕರಣ ಕ್ಲಿಯರ್ ಮಾಡಿದ್ದೆವೆ.

ಎಸಿ ಡಿಸಿ ೧೮೦ ದಿನಗಳಲ್ಲಿ ಭೂ ನ್ಯಾಯ ಪ್ರಕರಣ ಕ್ಲಿಯರ್ ಮಾಡಬೇಕು. ರಾಜ್ಯದಲ್ಲಿ ನಾನು ಅಧಿಕಾರದಲ್ಲಿ ಇದ್ದಾಗ ೬೦ ಸಾವಿರ ಭೂ ನ್ಯಾಯ ಪ್ರಕರಣ ಬಾಕಿ ಇದ್ದವು. ೩೦ ಸಾವಿರ ಪ್ರಕರಣಗಳನ್ನು ನಾವು ಕ್ಲಿಯರ್ ಮಾಡಿದ್ದೆವೆ. ಉಳಿದ ಪ್ರಕರಣಗಳನ್ನು ಜನವರಿ ತಿಂಗಳೊಳಗೆ ಕ್ಲಿಯರ್ ಮಾಡಲು ತಿಳಿಸಿದ್ದೆನೆ.ಈ ಬಗ್ಗೆ ಪ್ರತಿವಾರ ರಿವೂ ಮಾಡುತ್ತೆನೆ. ಇ ಆಫಿಸ್ ನಲ್ಲಿ ಯಾವ ಕಡತ ಎಲ್ಲಿದೆ ಒಂದ ಬಟನ್ ಒತ್ತಿದರೆ ಗೊತ್ತಾಗುತ್ತದೆ.

ನೂರಕ್ಕೆ ನೂರರಷ್ಟು ಅನುಷ್ಟಾನ ಈ ಆಫಿಸ್ ಮಾಡುತ್ತದೆ. ೧೫ ದಿನಗಳಿಗಿಂತಲೂ ಕಡತ ವಿ ಎ ಆರ್ ಐ ಬಳಿ ಉಳಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೆನೆ. ಜಮೀನು ದುರಸ್ಥಿ ಅಭಿಯಾನ ಮಾಡುವ ಬಗ್ಗೆ ಅಭಿಯಾನ ಹಮ್ಮಿಕೊಂಡಿದ್ದೆನೆ. ಜನರು ಯಾರು ಅರ್ಜಿ ಸಲ್ಲಿಸುವ ಆಗಿಲ್ಲ. ನಾವೆ ದುರಸ್ಥಿ ಪಟ್ಟಿ ಮಾಡಿ ಈ ಕೆಲಸ ಮಾಡುತ್ತೆವೆ ಎಂದರು. ೩ ವರ್ಷಗಳಿಂದ ಆಗದೆ ಬಾಕಿ ಇರುವ ಸರ್ವೆ ಇಲಾಖೆ ಕೆಲಸಗಳನ್ನು ಶೀಘ್ರವಾಗಿ ಮುಗಿಸಲು ಪೈಲಟ್ ಯೋಜನೆ ಜಾರಿಗೆ ತಂದಿದ್ದು,ರಾಮನಗರದಲ್ಲಿ ಈ ಯೋಜನೆ ಜಾರಿಗೆ ತಂದಿದ್ದೆವೆ ಎಂದು ಸರಕಾರದ ಕೆಲಸದ ಬಗ್ಗೆ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತಿಂದ್ರ ಆಡಿಯೋ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಯತೀಂದ್ರ ಆ ಕ್ಷೇತ್ರದ ಯಾವ ಸ್ಕೂಲ್ ಬಿಲ್ಡಿಂಗ್ ಮಾಡಲು ಪಟ್ಟಿ ನೀಡಿದರು.

ಈ ಬಗ್ಗೆ ಚರ್ಚೆ ಮಾಡುವುದರಿಂದ ಜನರ ಸಮಯ, ನಮ್ಮ ಸಮಯ ಎರಡೂ ರಾಜ್ಯದ ಜನರ ಸಮಯ ಹಾಳು ಮಾಡುತ್ತಿದೆವೆ. ಆರೋಪ ಮಾಡುವರ ಬಗ್ಗೆ ಕಳೆದ ಚುನಾವಣೆಯಲ್ಲಿ ಜನ ತೀರ್ಮಾನ ನೀಡಿದ್ದಾರೆ. ಜನಗಳ ಸಮಸ್ಯೆ ಇಟ್ಟುಕೊಂಡು ವಿರೋಧ ಪಕ್ಷದವರು ಮಾತನಾಡಲಿ ಎಂದರು.

ಈ ಸಂದರ್ಭದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಬನವಾಸೆ ರಂಗಸ್ವಾಮಿ, ಶ್ರೇಯಸ್ ಪಟೇಲ್, ಅಶೋಕ್, ಮುರುಳಿ ಮೋಹನ್, ಮಂಜುನಾಥ್ ಶರ್ಮ, ತಾರ ಚಂದನ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *