
ಹಾಸನ: ಹಳೆ ಬಿಲ್ ಮತ್ತು ಹಳೆ ಕಾಮಗಾರಿ ಬಗ್ಗೆ ಶ್ವೇತ ಪತ್ರ ಹೊರತಂದರೆ ಬಿಜೆಪಿ ಪಕ್ಷದ ಹಣೆ ಬರಹ ವಾಪಸು ಬರಲಿದೆ ಎಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಟಾಂಗ್ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರ ಟೆಕಾಫ್ ಆಗಿಲ್ಲ ವಿಚಾರ ಹಾಗೂ ಶಾಸಕರುಗಳಿಗೆ ಅನುದಾನ ಬಾರದೆ ಇರುವ ವಿಚಾರವಾಗಿ ಮಾತನಾಡಿ, ಬಿಜೆಪಿ ಸರ್ಕಾರ ಹೊಸ ಅನುದಾನ ತೆಗೆದುಕೊಳ್ಳಲು ಹಳೆ ಬಾಕಿ ಲೊಕಪಯೋಗಿ ಇಲಾಖೆ ೭ ಸಾವಿರ ಕೋಟಿ ಜಲಸಂಪನ್ಮೂಲ ಇಲಾಖೆಯಲ್ಲಿ ೧.೨೦ ಸಾವಿರ ಕೋಟಿ ಹಣ ಬಾಕಿ ಇರಿಸಿದೆ.
ಹಳೆ ಬಿಲ್, ಹಳೆ ಕಾಮಗಾರಿ ಬಗ್ಗೆ ಶ್ವೇತ ಪತ್ರ ಹೊರತಂದರೆ ಬಿಜೆಪಿ ಹಣೆ ಬರಹ ವಾಪಸು ಬರಲಿದೆ. ಬಿಜೆಪಿಯವರು ಮಾಡಿರುವ ಸಾಲವನ್ನು ಈಗ ಕಾಂಗ್ರೆಸ್ ತೀರಿಸುವ ಕೆಲಸ ಮಾಡುತ್ತಿದೆ. ಯಾರು ಯಾರಿಗೆ ೧೦ ಪರ್ಸೇಂಟ್ ಕೊಡುತ್ತಾರೊ ಗೊತ್ತಿಲ್ಲ. ಉಹಾಪೊಹ ಹರಿದಾಡುತ್ತಿದೆ ಯಾವಾಗ ಅಂತ್ಯವಾಗುತ್ತದೆ ಗೊತ್ತಿಲ್ಲ. ಸಿನಿಯಾರಿಟಿ ಮೇಲೆ ಕಾಮಗಾರಿ ಹಣ ಗುತ್ತಿಗೆದಾರರಿಗೆ ಬಿಡುಗಡೆ ಆಗುತ್ತಿದೆ ಎಂದರು.
ಹಾಸನ ಲೊಕಪಯೋಗಿ ಇಲಾಖೆ ಸಿನಿಯಾರಿಟಿ ಮೆಲೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಯಾಗುತ್ತಿದೆ.ಸೋತಿರುವ ಕಾರಣ ಸುಳ್ಳು ಹೇಳಿಕೊಂಡಿ ಜೆಡಿಎಸ್ ನವರು ಒಡಾಡುತ್ತಿದ್ದಾರೆ. ಬಿಜೆಪಿ – ಜೆಡಿಎಸ್ ಕಾಂಗ್ರೆಸ್ ಆಶಾಧಾಯಕ ಜಾತ್ಯಾತೀತ ಮತಗಳು ನಮಗೆ ಬರುವುದರಿಂದ ಕಾಂಗ್ರೆಸ್ ಲೊಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವುದಾಗಿ ವಿಶ್ವಾಸವ್ಯಕ್ತಪಡಿಸಿದರು.
ಹೌಸಿಂಗ್ ಫಾರ್ ಆಲ್ ಯೋಜನೆ ಜಾರಿಗೆ ತಂದಿದ್ದು, ಸರ್ಕಾರ ೫೦ ಪರ್ಸೇಂಟ್ ಫಲಾನುಭವಿಗಳು ಯೋಜನೆ ಜಾರಿಗೆ ತಂದಿದೆ. ಸರ್ಕಾರ ಫಲಾನುಭವಿಗಳು ಯೋಜನೆ ಹಣವನ್ನು ಕೇಂದ್ರ ಸರ್ಕಾರ ಕೂಡಲೇ ಮನೆ ನಿರ್ಮಾಣ ಮಾಡಬೇಕು. ಅರಸೀಕೆರೆ ತಾಲ್ಲೂಕಿನಲ್ಲಿ ೧೩೦೦ ಮನೆಗಳನ್ನು ತೆಗೆದುಕೊಂಡು, ೧೦೦೦ ಮನೆಗಳ ರೂಫಿಂಗ್ ಬಂದಿದೆ. ಉಳಿದ ಮನೆಗಳ ನಿರ್ಮಾಣ ಆಗಿಲ್ಲ. ೬೮ ಕೋಟಿ ವೆಚ್ಚದ ಯೋಜನೆಯಲ್ಲಿ ೭೫% ೩೫% ಸ್ಕೀಮ್. ಜಮೀರ್ ಅಹಮದ್ ಬಂದು ನೋಡಿಕೊಂಡು ಹೋಗಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಯಲ್ಲಿ ಸಿಎಂ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ನಾಯಕತ್ವದಡಿ ಕರ್ನಾಟಕದಲ್ಲಿ ಕಾಂಗ್ರೆಸ್ ೨೦ ಸ್ಥಾನ ಚುನಾವಣೆಯಲ್ಲಿ ಗೆಲ್ಲಿಸುತ್ತದೆ. ಸಿದ್ದರಾಮಯ್ಯ ಮಗನ ವಿಡಿಯೋ ವೈರಲ್ ಪ್ರಕರಣ ನಾನು ಪ್ರತಿಕ್ರಿಯೆ ನೀಡಲ್ಲ. ಇದು ಹಿಟ್ ಅಂಡ್ ರನ್ನ ಕೇಸ್. ಇದು ಆರೋಪ ಮಾಡಿದವರು ಪ್ರೂ ಮಾಡಬೇಕು. ಮುಖ್ಯಮಂತ್ರಿ ಮಗ ವರ್ಗಾವಣೆ ವಿಚಾರ ಮಾತನಾಡಿದರೆ ತಪ್ಪಲ. ಹಿಂದೆ ಮುಖ್ಯಮಂತ್ರಿ ಮಕ್ಕಳು ಯಾರು ವರ್ಗಾವಣೆ ಮಾಡಿಸಿಲ್ಲವ! ಕುಮಾರಸ್ವಾಮಿ ದೊಡ್ಡವರು ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕಿಸಿದರು.
