
ಹಾಸನ: ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವ ಶಿಕ್ಷಣ ಎಂಬುದು ನಿಂತ ನೀರಲ್ಲ ಅದು ವಿಶಾಲವಾಗಿ ನಿರಂತರವಾಗಿರುತ್ತದೆ ಎಂದು ರಾಜ್ಯ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ ತಿಳಿಸಿದರು.
ನಗರದ ಹೊಸ ಬಸ್ ನಿಲ್ದಾಣ ರಸ್ತೆ, ಮೇಲ್ ಸೇತುವೆ ಬಳಿ ಇರುವ ಸಂತ ಫಿಲೋಮಿನಾ ಕಾಲೇಜು ಸಭಾಂಗಣದಲ್ಲಿ ಡಿಪಾರ್ಟ್ಮೆಂಟ್ ಆಫ್ ಸ್ಕೂಲ್ ಪಿಯು ಎಜುಕೇಶನ್, ಫಾರಂ ಆಫ್ ಇಂಗ್ಲೀಷ್ ಉಪನ್ಯಾಸಕರು ಮತ್ತು ಪ್ರಿನ್ಸಿಪಾಲ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪಿಯು ಕಾಲೇಜು ಇಂಗ್ಲೀಷ್ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಗಾರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,
ಶಿಕ್ಷಣ ಎಂಬುದು ನಿಂತ ನೀರಲ್ಲ. ನಿರಂತರವಾಗಿ ಅಭ್ಯಾಸ ಮಾಡುವುದು ಇದ್ದೆ ಇರುತ್ತದೆ. ಆಗ ಮಾತ್ರ ತನ್ನ ಆಕರ್ಷಣೆ ಉಳಿಸಿಕೊಂಡು ಬರುವುದಕ್ಕೆ ಮತ್ತು ಮುಂದುವರೆಸಿಕೊಂಡು ಬರುವುದಕ್ಕೆ ಸಾಧ್ಯ. ಇವತ್ತಿನ ಕಾಲಗಟ್ಟದಲ್ಲಿ ಬದಲಾವಣೆ ನಿರಂತರವಾಗಿ ಬರುತ್ತಲೆ ಇರುತ್ತದೆ. ಪ್ರತಿನಿತ್ಯ ಹೊಸ ಹೊಸ ವಿಚಾರಗಳನ್ನು ದಾಖಲಿಸಿಕೊಳ್ಳಬೇಕು. ಪಿಯು ಇಂಗ್ಲೀಷ್ ಉಪನ್ಯಾಸಕರಿಗೆ ಇಂತಹ ಕಾರ್ಯಗಾರವು ಉಪಯುಕ್ತವಾಗಿದೆ ಎಂದರು.
ಎಲ್ಲಾ ಭಾಷೆಗಳಿಗಿಂತ ಇಂಗ್ಲೀಷ್ ಅತ್ಯಂತ ವಿಶಾಲವಾದ ಭಾಷೆಯಾಗಿದ್ದು, ಈ ಜಗತ್ತಿನ ಭಾಷೆ. ಅದು ತುಕ್ಕು ಹಿಡಿಯುವಂತದಲ್ಲ. ಈ ಜಗತ್ತಿನಲ್ಲೆಲ್ಲ ಸುತ್ತಿಕೊಂಡು ಬಂದಿದೆ. ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರದೊಂದಿಗೆ ಸುತ್ತಾಡಿಕೊಂಡು ಬರಲು ಈ ಭಾಷೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಕಿವಿಮಾತು ಹೇಳಿದರು.
ಆದ್ದರಿಂದಲೇ ಈ ಭಾಷೆಗೆ ಸರ್ವವ್ಯಾಪಿ ಪ್ರಾಮುಖ್ಯತೆ ಪಡೆದಿದೆ. ಇಂಗ್ಲೇಂಡ ದೇಶದವರು ಇಂಗ್ಲೀಷ್ ಭಾಷೆಯನ್ನು ಎಷ್ಟು ಪ್ರೀತಿಸುತ್ತಾರೆ ಗೊತ್ತಿಲ್ಲ. ಆದರೇ ಇಂಡಿಯಾದ ಜನರು ಹೆಚ್ಚು ಪ್ರೀತಿಸುತ್ತಾರೆ. ಈ ಭಾಷೆಯಿಂದಲೇ ಇತರೆ ದೇಶಗಳಲ್ಲಿ ನಮ್ಮ ಭಾರತದವರು ನೆಲೆ ನಿಂತಿದ್ದಾರೆ.
ಅಮೇರಿಕಾ, ಆಸ್ಟೇಲಿಯಾ, ಜಪಾನ್, ಚೀನಾ, ಸೌತ್ ಆಫ್ರೀಕಾ ಯಾವ ದೇಶಕ್ಕೆ ಹೋದರೂ ಕೂಡ ದೊಡ್ಡ ಸಂಖ್ಯೆಯಲ್ಲಿ ನಮ್ಮ ಜನರು ಇರುತ್ತಾರೆ. ಇಂಗ್ಲೀಷ್ ಎಂಬುದು ಈ ಜಗತ್ತಿನಲ್ಲಿ ಅಷ್ಟರ ಮಟ್ಟಿಗೆ ಜನಮಾನದ ಮೇಲೆ ಅಗಾದವಾದ ಪರಿಣಾಮವನ್ನು ಬೀರಿದೆ ಎಂದು ಸಲಹೆ ನೀಡಿದರು. ಇಂಗ್ಲೀಷ್ ಹೊಸ ಹೊಸ ವಿಚಾರಗಳನ್ನು ಎಷ್ಟು ಆತ್ಮವಲೋಖನ ಮಾಡಿದರೂ ಕಡಿಮೆ. ಇಂತಹ ಕಾರ್ಯಗಾರವು ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಪಾರ್ಟ್ಮೆಂಟ್ ಆಫ್ ಸ್ಕೂಲ್ ಪಿಯು ಎಜುಕೇಶನ್ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಇಂಗ್ಲೀಷ್ ಫಾರಂ ಅಧ್ಯಕ್ಷ ಡಿ.ಕೆ. ಕುಮಾರಯ್ಯ, ಗೋಪಾಲ್, ಪಿಯು ಕಾಲೇಜು ಪ್ರಿನ್ಸಿಪಾಲ್ ಅಸೋಸಿಯೇಶನ್ ಅಧ್ಯಕ್ಷ ಎ.ಬಿ. ಸುರೇಂದ್ರಕುಮಾರ್, ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಹೆಚ್.ಟಿ. ಸುರೇಶ್ ಕುಮಾರ್, ಸಂತಾ ಫಿಲೋಮಿನಾ ವಿದ್ಯಾರ್ಥಿನಿಯರ ಕಾಲೇಜು ಪ್ರಾಂಶುಪಾಲೆ ಡಾ. ಜಸೀಂತಾ ಕೊರಿಯಾ, ಇಂಗ್ಲೀಷ್ ಉಪನ್ಯಾಸಕ ಆರ್. ಸದಾನಂದ, ಕಾರ್ಯದರ್ಶಿ ಎಸ್.ಎಂ. ಕುಸುಮಾ ಹಾಗೂ ಲಕ್ಷ್ಮೀನಾರಾಯಣ್ ಇತರರು ಉಪಸ್ಥಿತರಿದ್ದರು.





