
ಸಕಲೇಶಪುರ: ತಾಲ್ಲೂಕಿನ ಬೆಳಗೋಡು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 9 ಎಕ್ಕರೆ ವ್ಯಾಪ್ತಿಯಲ್ಲಿ ಕೆರೆ ಇದ್ದು, ಕೆರೆಗೆ ಭದ್ರತೆ ಸರಳನ್ನು ಅಳವಡಿಸದೆ ಪ್ರತಿನಿತ್ಯ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತಿರುತ್ತವೆ,
ಈಸರವಳ್ಳಿ ಕೂಡಿಗೆ ಮಾರ್ಗವಾಗಿ ಹೊಸಪೇಟೆ, ಈರಣ್ಣನಪೇಟೆ, ಈರಣ್ಣನ ಕೊಪ್ಪಲು, ಬೆಳಗೋಡು, ಉದಯವಾರ ಹಾಗೂ ಈ ಮಾರ್ಗ ಮಧ್ಯ ಪ್ರತಿನಿತ್ಯ ಶಾಲೆ ವಾಹನಗಳು, ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಸೇರಿದಂತೆ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
ಕೆರೆ ಏರಿಗೆ ಭದ್ರತೆ ಇಲ್ಲದೆ ಭಯವಿತರಾಗಿ ವಾಹನಗಳು ಸಂಚರಿಸುವ ಪರಿಸ್ಥಿತಿ ಎದುರಾಗಿದೆ, ಹಾಗೆ ಕೆರೆ ಬದಿಯಲ್ಲಿ ವಿದ್ಯುತ್ ಕಂಬಗಳಿದ್ದು, ಮಳೆಯಲ್ಲಿ ಮಣ್ಣು ಕುಸಿದ ಪರಿಣಾಮ ವಿದ್ಯುತ್ ಕಂಬಗಳು ಬೀಳುವ ಆತಂಕ ಎದುರಾಗಿದೆ,
ಕೂಡಲೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಮುಂದೆ ಎದುರಾಗುವ ದುರಂತವನ್ನು ತಪ್ಪಿಸಲು ಕೂಡಲೆ ಕ್ರಮವಹಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಶೆಟ್ಟಿ ಬಣದ ಗೌರವ ಅಧ್ಯಕ್ಷರಾದ ಬಿ ಎನ್ ಬಸವರಾಜ್, ಅಧ್ಯಕ್ಷರಾದ ಧರ್ಮಪ್ಪ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರು, ಜೆಸಿಬಿ ಗಿರೀಶ್, ವೀರೇಶ್, ಇತರರು ಹಾಜರಿದ್ದರು.




