*ಟೀಮ್ ಇಂಡಿಯಾ ಗೆ ನಗರದಲ್ಲಿ ಅಭಿಮಾನಿಗಳಿಂದ ಶುಭ ಹಾರೈಕೆ*

ಹಾಸನ: ಇಂದು ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಲಿ ಎಂದು ಹಾರೈಸಿ ನಗರದ ವಿವಿಧೆಡೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಂಡಕ್ಕೆ ಶುಭ ಹಾರೈಸಿದ್ದಾರೆ ನಗರದ ಪ್ರಮುಖ ಬೀದಿಗಳಲ್ಲಿ ರನ್ನಿಂಗ್ ಮಾಡಿ ಜಯಘೋಷ ಮೊಳಗಿಸಿರುವ ಅಭಿಮಾನಿಗಳು ಟೀಂ ಇಂಡಿಯಾ ಜರ್ಸಿ ಧರಿಸಿ ಶುಭ ಕೋರಿದ್ದಾರೆ

ಸುಮಾರು 10ಕಿ.ಮಿ ಜಾಗಿಂಗ್ ಮಾಡಿ ಭಾರತ ಪರ ಜಯ ಘೋಷ ಕೂಗಿ ಶುಭಾಶಯ ಕೋರಿದ್ದು ಜಿಲ್ಲಾ ಕ್ರೀಡಾಂಗಣ, ಎನ್.ಆರ್ ವೃತ್ತ, ಡಿ.ಸಿ ಕಚೇರಿ, ಶಂಕರಮಠ ರಸ್ತೆ ಮೂಲಕ ರನ್ನಿಂಗ್ ಮಾಡಿ ಗಮನ ಸೆಳೆದಿದ್ದಾರೆ

ಇಂದು ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿ ಹೇಮಾವತಿ ಪ್ರತಿಮೆ ಬಳಿಯೂ ಘೋಷಣೆ ಕೂಗಿ ಶುಭ ಕೋರಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *