ಅರಸೀಕೆರೆ : ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಅಜೋಲಾ ಉತ್ಪಾದನೆಯ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿ ಕೊಂಡಿದ್ದರು.

ಅಜೋಲವನ್ನು ಉತ್ಪಾದಿಸಿ ಹಸುಗಳಿಗೆ ಹಿಂಡಿಯ ಜೊತೆ ಹಾಕುವುದರಿಂದ ಹಾಲಿನ ಇಳುವರಿ ಹಾಗು ಕೊಬ್ಬಿನಂಶ ಹೆಚ್ಚುತದೆ ಹಾಗು ಅಜೋಲಾ ಸಾರಜನಕವನ್ನು ಭೂಮಿಗೆ ಸೇರಿಸುವುದರಿಂದ ಗೊಬ್ಬರವಾಗಿ ಬಳಸಬಹುದು ಎಂದು ತಿಳಿಸಿಕೊಟ್ಟರು .

ಅಜೋಲಾ ಬೆಳೆಯುದಕ್ಕಾಗಿ ಮಣ್ಣನ್ನು ಅಗೆದು ಸಮ ಮಾಡಿ ನಂತರ ಪ್ರಾಸ್ಟಿಕ್ ಹಾಳೆಯನ್ನು ಹರಡಬೇಕು. ನಂತರ 2 x 2 M ಗಾತ್ರದ ಕೊಳಕ್ಕೆ 10 – 15 ಕೇಜಿ ಮಣ್ಣನ್ನು ಸೇರಿಸಿ ಅದರ ಮೇಲೆ 10 ಸೆಂಮೀ ನೀರು ನಿಲ್ಲುವಂತೆ ಮಾಡಬೇಕು ಇದಾದ ನಂತರ ತಾಯಿ ಅಜೋಲಾವನ್ನು ನೀರಿನಲ್ಲಿ ತೇಲುವಂತೆ ಬಿಡಬೇಕು ಅದು ಸುಮಾರು 7 ದಿನಗಳಲ್ಲಿ ದ್ವಿಗುಣಗೊಳುತ್ತದೆ ಎಂಬುದನ್ನು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಡಾ. ಪ್ರಮೋದ್ ಜಿ ಸಹಾಯಕ ಪ್ರಾಧ್ಯಾಪಕರು ಬೇಸಾಯ ಶಾಸ್ತ್ರ ವಿಭಾಗ ಇವರು ಆಗಮಿಸಿ ಹೆಚ್ಚಿನ ಮಾಹಿತಿ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *