ಆಲೂರು : ತಾಲ್ಲೂಕಿನ ಕೆ.ಹೊಸಕೋಟೆ ಹೋಬಳಿ ಹರಿಹಳ್ಳಿ(ಟೆಂಪಲ್ )ಗ್ರಾಮದಲ್ಲಿರುವ ಕೆಂಚಾಂಬ ದೇವಿಯ ಚಿಕ್ಕ ಜಾತ್ರೆ ಮಹೋತ್ಸವವು ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವೈಭವದಿಂದ ನಡೆಯಿತು.

ಹಾಸನದ ಆಧಿದೇವತೆ, ಹಾಸನಾಂಬೆ ದೇವಿಯ ಬಾಗಿಲು ಹಾಕಿದ ನಾಲ್ಕು ದಿನದ ನಂತರ ಶ್ರೀ ಕೆಂಚಾಂಬಿಕ ದೇವಿಯ ಜಾತ್ರಾ ಮಹೋತ್ಸವ ಪ್ರಾರಂಭವಾಗುತ್ತವೆ. ನ.18ರಂದು ರಾತ್ರಿ ಮೂಲ ದೇವಾಸ್ಥಾನದಲ್ಲಿ ದೇವಿಗೆ ಸಪ್ತಮಾತೃಕೆಯರ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನ.19ರ ಬೆಳಗ್ಗೆ ಕೆಂಚಾಂಬ ದೇವಿಯ ಒಡವೆ ಹಾಗೂ ವಿಗ್ರಹಗಳನ್ನು ಮೂಲ ದೇವಸ್ಥಾನದಿಂದ ವಾದ್ಯಗೋಷ್ಠಿಯ ಜೊತೆ ನೂರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಶ್ರೀ ಕೆಂಚಾಂಬ ದೇವಾಲಯಕ್ಕೆ ಕರೆತರಲಾಯಿತು.

ನಂತರ ದೇವಾಲಯದ ಪ್ರಧಾನ ಅರ್ಚಕರಾದ ಎಚ್ಎನ್ ರಾಮಸ್ವಾಮಿ ಮತ್ತು ಸತ್ಯನಾರಾಯಣ್ ರವರ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜೆ ನೈವೇದ್ಯ ನೆರವೇರಿದವು.

ಮಡಿವಾಳ ವಂಶಸ್ಥರು ಅನ್ನಬಲಿ ಹಾಕಿದ ನಂತರ ದೇವಿಗೆ ಮಹಾಮಂಗಳಾರತಿ ನಡೆಯಿತು. ಮಂಗಳಾರತಿ ನಂತರ ಮುಜರಾಯಿ ಇಲಾಖೆ ಆಡಳಿತ ಅಧಿಕಾರಿ ಮತ್ತು ತಹಶೀಲ್ದಾರ್ ನಂದಕುಮಾರ್ ದಂಪತಿಗಳು ಕೆಂಚಾಂಬಿಕೆ ದೇವಿಯ ದರ್ಶನ ಪಡೆದರು.

ನಂತರ ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅನುಕೂಲ ಕಲ್ಪಿಸಲಾಯಿತು. ರಕ್ತ ಬಿಜಾಸುರನ ಕೊಂದ ದೇವತೆ ಶ್ರೀ ಕೆಂಚಾಂಬಿಕೆ ಎಂಬುದು ಭಕ್ತಾದಿಗಳ ನಂಬಿಕೆ ವರ್ಷದಲ್ಲಿ ಎರಡು ಬಾರಿ ಜಾತ್ರೆ ನಡೆಯುವ ಸಂದರ್ಭದಲ್ಲಿ ದೇವಿ ದರ್ಶನಕ್ಕೆ ಅವಕಾಶವನ್ನು ಭಕ್ತರಿಗೆ ಪುರಾತನ ಕಾಲದಿಂದ ಅವಕಾಶ ಕಲ್ಪಿಸಲಾಗಿದೆ.

ಜಾತ್ರೆ ಸಂದರ್ಭದಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಆಲೂರು ಪೊಲೀಸ್ ಠಾಣೆ ವತಿಯಿಂದ ಬಿಗಿ ಬಂದೋಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

ಮಧ್ಯಾಹ್ನ ಮೂರು ಮೂವತ್ತಕ್ಕೆ ಸರಿಯಾಗಿ ಕೆಂಡೋತ್ಸವ ನಡೆಯಿತು ನಂತರ ಪೂಜಾ ಕೈ ಕಾರ್ಯಗಳು ನೆರವೇರಿದವು.

ಕೆಂಚಾಬ ದೇವಿಯ ವಿಶೇಷತೆ: ಹರಿಹಳ್ಳಿ ಗ್ರಾಮದಲ್ಲಿರುವ ಮೂಲ ದೇವಾಲಯಕ್ಕೆ ಹಿಂದಿನ ದಿನ ಸಪ್ತಮಾತೃಕ್ಕೆಯರು ಸೇರಿ ಭಕ್ತರ ಪೂಜೆಯನ್ನು ಸ್ವೀಕರಿಸುತ್ತಾರೆ.

ಶಾಸಕ ಸಿಮೆಂಟ್ ಮಂಜು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದವರು ರಾಜ್ಯದಲ್ಲಿ ಬರಗಾಲವಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆಯಾಗಿ ರೈತರು ಮತ್ತು ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಕೆಂಚಂಬ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಚ್ ಡಿ ಗೋಪಾಲ್ ಮಾತನಾಡಿ ವರ್ಷದಲ್ಲಿ ಎರಡು ಬಾರಿ ಅಮ್ಮನವರ ಜಾತ್ರೆ ನಡೆಯುತ್ತದೆ ದೊಡ್ಡ ಜಾತ್ರೆ ಮತ್ತು ಚಿಕ್ಕ ಜಾತ್ರೆ,ಚಿಕ್ಕಜಾತ್ರೆ ಎಲ್ಲಿ ಅಮ್ಮನವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುವ ಅವಕಾಶವಿದೆ.

ಹಾಸನಾಂಬ ದೇವಸ್ಥಾನದ ಬಾಗಿಲು ಹಾಕಿದ 3 ದಿನದ ನಂತರ ಹರಿಹಳ್ಳಿ ಗ್ರಾಮದಲ್ಲಿ ಚಿಕ್ಕಜಾತ್ರೆ ನಡೆಯುತ್ತದೆ. ಬಂದಂತ ಸಾವಿರಾರು ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗುತ್ತೆ ರೀತಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತಾದಿಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆ, ಉಚಿತ ಆರೋಗ್ಯ ತಪಸಣೆ, ಸೂಕ್ತ ಪೊಲೀಸ್ ಬಂದೋಬಸ್ತ್, ಉಚಿತ ಊಟದ ವ್ಯವಸ್ಥೆ, ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಶಾಸಕ ಸಿಮೆಂಟ್ ಮಂಜು ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು ರಘು, ಗ್ರಾ ಪಂ. ಚಂದ್ರಶೇಖರ್ ಕಾಗನೂರು,ಬಿಜೆಪಿ ಮುಖಂvಡ ಕಟಕದ್ದೆ ನಾಗರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ ಎಸ್ ಮಂಜೇಗೌಡ,ಉಪತಾಸಿಲ್ದಾರ್ ಮಧುಸೂದನ್, ರೆವೆನ್ಯೂ ಇನ್ಸ್ಪೆಕ್ಟರ್ ವಸಂತ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಗಂಗಾಧರ್,ಕೆಂಚಂಬ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಚ್ ಡಿ ಗೋಪಾಲ್,ವಿ ಪಿ ಹೆಗ್ಗಡೆ, ಸಿದ್ದಬಸವೇಗೌಡ, ಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಎಲ್ಲಾ ಸದಸ್ಯರುಗಳು, ದೇವಸ್ಥಾನದ ಸಮಿತಿಯ ಎಲ್ಲಾ ಸದಸ್ಯರುಗಳು, ಸ್ಥಳೀಯ ಮುಖಂಡರುಗಳು, ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು,ಬಂದಂತಹ ಭಕ್ತಾದಿಗಳಿಗೆ ಎಲ್ಲಾ ರೀತಿ ಸಹಕಾರ ನೀಡಿ ಭಕ್ತಾದಿಗಳಿಗೆ ದರ್ಶನ ಮಾಡಲು ಅನುವು ಮಾಡಿಕೊಟ್ಟರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *