
ಇಂದು ಅರಸೀಕೆರೆ ಮಹಿಳಾ ವೇದಿಕೆ ಹಾಸನ ಹಾಗೂ ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮ ಮತ್ತು ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ಇವರ ಕನ್ನಡ ಪರ ಹೋರಾಟಗಾರರು ಎಂದು ಗುರುತಿಸಿ ಈ ಕಾರ್ಯಕ್ರಮದಲ್ಲಿ ಸಿರಿಗನ್ನಡ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು .
ಇದೆ ಸಂದರ್ಭದಲ್ಲಿ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ ಕೂಡ ನಡೆಯಿತು ಮಾಲಾ ಚಲುವನಹಳ್ಳಿ ಸಿರಿಗನ್ನಡ ಮಹಿಳಾ ಜಿಲ್ಲಾ ಅಧ್ಯಕ್ಷರು ಇವರ ನೆನೆಪಾಗುವ ಮುನ್ನ ಎಂಬ ಕವನ ಸಂಕಲನ,ಬಾಗ್ಯ ಮಂಜುನಾಥ್ ರವರ ಆರು ಪಾದ ನೂರು ಭಾವ ಶ್ರೀ ಮತಿ ಶಾರದ ದೇವರಾಜ್ ರವರ ಬನಸಿರಿ ಎಂಬ ಕವಿತೆಗಳ ಪುಸ್ತಕ ಬಿಡುಗಡೆ ಮಾಡಲಾಯಿತು
ಇದೆ ಸಂದರ್ಭದಲ್ಲಿ ಶ್ರೀ ಮತಿ ರಜನಿ ಜೀರಗ್ಯಳ, ರಾಜ್ಯಾಧ್ಯಕ್ಷರು ಸಿರಿಗನ್ನಡ ಮಹಿಳಾ ವೇದಿಕೆ ಬೆಂಗಳೂರು, ಶ್ರೀಮತಿ ಮಾಲ ಚಲುವನಹಳ್ಳಿ, ಜಿಲ್ಲಾ ಅಧ್ಯಕ್ಷರು ಸಿರಿಗನ್ನಡ ವೇದಿಕೆ ಮಹಿಳಾ ವೇದಿಕೆ ಹಾಸನ ಜಿಲ್ಲೆ, ಚಂದ್ರು ಬಾಣವರ ಜಿಲ್ಲಾ ಅಧ್ಯಕ್ಷರು ಸಿರಿಗನ್ನಡ ವೇದಿಕೆ ಹಾಸನ ಜಿಲ್ಲೆ ಉಮೇಶ್ ಹೊಸಹಳ್ಳಿ ಸಾಹಿತಿಗಳು, ಪರಮೇಶ್ ಸಾಹಿತಿಗಳು ಮಡಬಲು ಪ್ರಜ್ವಲ್ ಕೋಡಿಹಳ್ಳಿ ಆಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾಹಿತಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು

