
*ಪದ್ಧತಿ ಪ್ರಾತ್ಯಕ್ಷಿಕೆ ಎರೆಹುಳು ಗೊಬ್ಬರ ತಯಾರಿಕೆ*
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಎರೆಹುಳು ಗೊಬ್ಬರ* ತಯಾರಿಸುವ ವಿಧಾನದ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಎರೆಹುಳುಗಳನ್ನು ರೈತರ ಮಿತ್ರ ಎಂದು ಕರೆಯುತ್ತೇವೆ. ಎರೆಹುಳುಗಳು ಕೃಷಿ ತ್ಯಾಜ್ಯವನ್ನು ತಿಂದು ಗೊಬ್ಬರವಾಗಿ ಪರಿವರ್ತಿಸುತ್ತವೆ. ಈ ಗೊಬ್ಬರವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಎರೆಹುಳು ಗೊಬ್ಬರ ತಯಾರಿಸಲು ತೆಂಗಿನಕಾಯಿ ಸಿಪ್ಪೆ , ಸಗಣಿ ರಾಡಿ, ಒಣಗಿದ ಬೆಳೆ(ಹುಲ್ಲು), ತರಕಾರಿ ತ್ಯಾಜ್ಯ ಸೇರಿದಂತೆ ಬಳಸಬಹುದು.
ಎರೆಗೊಬ್ಬರದ ತೊಟ್ಟಿಯನ್ನು ನೆರಳಿನ ಕೆಳಗೆ ಮಾಡಬೇಕು.ಮೊದಲಿಗೆ ಒಂದುತೊಟ್ಟಿಯಲ್ಲಿ ತೆಂಗಿನಕಾಯಿ ಸಿಪ್ಪೆ ಹಾಕಬೇಕು, ನಂತರ ಸಗಣಿ ರಾಡಿ ಹಾಕಿ, ಒಣಗಿದ ಹುಲ್ಲು ಮತ್ತೆ ಸಗಣಿ ರಾಡಿ, ಹಸಿ ತ್ಯಾಜ್ಯಗಳು ಹಾಕಿ ಮತ್ತೆ ಸಗಣಿ ರಾಡಿ ಹಾಗೂ ಕೊಟ್ಟಿಗೆ ಗೊಬ್ಬರ ಹಾಕಿ ಗೋಣಿ ಚೀಲದಿಂದ ತೊಟ್ಟಿಯನ್ನು ಮುಚ್ಚಬೇಕು.20 ದಿನಗಳ ನಂತರ ಎರೆಹುಳುಗಳನ್ನು ತೊಟ್ಟಿಗೆ ಬಿಡಬೇಕು ,45 ದಿನಗಳಾದ ಮೇಲೆ ಗೊಬ್ಬರವನ್ನು ತಿರುಗಿಸಬೇಕು ಹಾಗೂ 3 ತಿಂಗಳುಗಳಾದ ಮೇಲೆ ಹೊಲಕ್ಕೆ ಗೊಬ್ಬರವಾಗಿ ಬಳಸಬಹುದು.
ಕೃಷಿ ಮಹಾವಿದ್ಯಾಲಯ ಹಾಸನದಲ್ಲಿ ಉತ್ತಮ ಗುಣಮಟ್ಟದ ಎರೆಹುಳು ಗೊಬ್ಬರ ಮಾರಾಟಕ್ಕೆ ಲಭ್ಯವಿರುತ್ತದೆ.ಒಂದು ಕೆ. ಜಿ. ಎರೆಹುಳುಗಳಿಗೆ 650 ರೂಪಾಯಿ ಹಾಗೂ ಎರೆಹುಳು ಗೊಬ್ಬರಕ್ಕೆ 10 ರೂಪಾಯಿ. ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳು ರೈತರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕೃಷ್ಣೆಗೌಡ, ಸುರೇಶ, ಪುಟ್ಟಸ್ವಾಮಿ, ಮಹಾಲಿಂಗೇಗೌಡ, ಅಶೋಕ್, ಕುಮಾರ, ಹರೀಶ್ ಸೇರಿದಂತೆ ಹಲವಾರು ಆಸಕ್ತ ರೈತರು ಭಾಗವಹಿಸಿದ್ದರು.
