
TV46 ಮಲೆನಾಡು ಚಾನೆಲ್ ಹಾಗೂ ವೆಬ್ ಚಾನೆಲ್ ನ ಕಳಕಳಿಯ ಮನವಿ ಕಡ್ಡಾಯವಾಗಿ ಮತ ಚಲಾಯಿಸಿ.ಸಕಲೇಶಪುರ ಆಲೂರು ಕಟ್ಟಾಯ ವಿಧಾನ ಸಭಾ ಕ್ಷೇತ್ರದ ಚುನಾವಣೆ ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಘಂಟೆಯ ವರೆಗೆ ನಡೆಯಲಿದ್ದು ಭಾರತದ ಪ್ರಜೆಯಾದ ಕರುನಾಡಿನ ಮಕ್ಕಳಾದ ನಾವುಗಳು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು TV46 ಮಲೆನಾಡು ಚಾನೆಲ್ ಬಳಗ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತದೆ.🙏🙏🙏🙏🙏
ಸಮಾನ ಹಕ್ಕು, ಕರ್ತವ್ಯಗಳನ್ನು ನಿರೂಪಿಸುವ ಪ್ರಜಾಪ್ರಭುತ್ವ ಅತ್ಯಂತ ಶ್ರೇಷ್ಠ ರಾಜಕೀಯ ವ್ಯವಸ್ಥೆ ಮತ್ತು ಮಾರ್ಗವಾಗಿದೆ. ಇದನ್ನು ಮೌಲ್ಯಯುತಗೊಳಿಸುವ ಹೊಣೆ ಎಲ್ಲರ ಮೇಲಿರುತ್ತದೆ. ಏಕೆಂದರೆ ನಾವು ರೂಪಿಸಿದಂತೆ ಆ ವ್ಯವಸ್ಥೆ ಇರುತ್ತದೆ. ಹಾಗಾಗಿ ನಾವು ನೀವು ಮತ ಚಲಾಯಿಸೋಣ.

