
ಅರೇಹಳ್ಳಿ : ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದುಮನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಮೂರು ಲಕ್ಷ ರೂ ಅಂದಾಜು ವೆಚ್ಚದಲ್ಲಿ ಕಾಂಕ್ರೆಟ್ ಒಳಚರಂಡಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ಸೋಮಯ್ಯ,ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಳಗಳಲೆ,ಸದಸ್ಯರಾದ ಪವಿತ್ರ,ಮಂಜುನಾಥ್, ಮಲ್ಲಿಕಾರ್ಜುನ್ ನಾರ್ವೆ, ವೀಣಾ, ಪಿಡಿಓ,ಚಂದ್ರಯ್ಯ,ಕಾರ್ಯದರ್ಶಿಚಾಮರಾಜ್,ಎಸ್ ಡಿ ಎ ಸುನೀತಾ, ಹಾಗೂ ಗ್ರಾಮಸ್ಥರು ಇದ್ದರು.



