
ಸಕಲೇಶಪುರ : ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು .ಈ ಬಾರಿ ಅಧಿವೇಶನಕ್ಕೆ ಸೂಕ್ತ ಸಮಯಕ್ಕೆ ಆಗಮಿಸುವ ಶಾಸಕರುಗಳಿಗೆ ಕಾಫಿ ಕಪ್ ಗಿಫ್ಟ್ ಕೊಡಲಾಗುತ್ತಿದ್ದು ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜುನಾಥ್ ಸ್ಪೀಕರ್ ಯುಟಿ ಖಾದರ್ ಅವರಿಂದ ಗುರುವಾರ ವಿಶೇಷ ಬಹುಮಾನ ಪಡೆದಿದ್ದಾರೆ.
ಈ ಬಗ್ಗೆ ಸ್ವೀಕರ್ ಯುಟಿ ಖಾದರ್ ಮಾಹಿತಿ ನೀಡಿದ್ದು ಕಳೆದ ಅಧಿವೇಶದನಲ್ಲಿ ಮೊದಲ ಬೇಗ ಬಂದವರ ಹೆಸರನ್ನ ಕೂಗಿ ಹೇಳುತ್ತೇವೆ ಎಂದು ಹೇಳಿದ್ವಿ. ಅಂತಿಮವಾಗಿ ಯಾರು ಎಷ್ಟು ದಿನ ಬಂದಿದ್ದಾರೆ ಅವರಿಗೆ ಗಿಫ್ಟ್ ಕೊಡುವುದಾಗಿ ಹೇಳಿದ್ವಿ. ಕಳೆದ ಅಧಿವೇಶನದಲ್ಲಿ ಕೆಲವರು ಒಂದು ದಿನ, ಮತ್ತೆ ಕೆಲವರು ಐದು ದಿನ, ಹಲವರು ಹತ್ತು ದಿನವೂ ಬಂದಿದ್ದಾರೆ.
ಇದಕ್ಕೆ ಅನುಗುಣವಾಗಿ ಇವರಿಗೆ ಪ್ರೋತ್ಸಾಹ ನೀಡಲು, ಗುರುತಿಸಿಕೊಳ್ಳಲು ಪ್ರಶಸ್ತಿ ನೀಡುತ್ತಿದ್ದೇವೆ. ತಡವಾಗಿ ಬರುವವರಿಗೆ ಶಿಕ್ಷೆ ವಿಧಿಸುವುದಕ್ಕಿಂತ ಈ ರೀತಿ ಉಡುಗೊರೆ ಕೊಟ್ಟು ಬೇಗ ಬರುವಂತೆ ಪ್ರೇರಣೆ ಮಾಡುತ್ತೇವೆ ಎಂದು ಸ್ಪೀಕರ್ ಖಾದರ್ ತಿಳಿಸಿದ್ದಾರೆ.
