
ಬೇಲೂರು : ಪಟ್ಟಣದ ಹೊರವಲಯದ ಭಾರತ್ ಕನ್ವೆನಷನ್ ಹಾಲ್ ನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ ಶಿವಾರಾಂ ಅವರು ವಿಧಾನಸಭೆ ನಮ್ಮ ಸೋಲಿಗೆ ನಾನು ಯಾರನ್ನು ಹೊಣೆಗಾರನನ್ನಾಗಿ ಮಾಡುವುದಿಲ್ಲ.ಸಣ್ಣ ಪುಟ್ಟ ತಪ್ಪಿನಿಂದಾಗಿ ಕಾಂಗ್ರೆಸ್ ಪಕ್ಷ ಸೋತಿದೆ ಹೊರತು ಬಿ ಶಿವರಾಂ ಸೋತಿಲ್ಲ.
ಅಂದ ಮಾತ್ರಕ್ಕೆ ಇಲ್ಲಿಂದ ಓಡಿ ಹೋಗುವ ವ್ಯಕ್ತಿ ನಾನಲ್ಲ ನನಗೆ ಕಾರ್ಯಕರ್ತರೇ ನನ್ನ ಬಳಿ ಸಂಕಷ್ಟ ಹೇಳಿಕೊಂಡು ಬರುವವರೇ ನನ್ನ ಆಸ್ತಿ ಎಂದ ಅವರು ಇಂದು ನಮ್ಮ ತಾಲೂಕಿನ ಸ್ಥಿತಿ ಗತಿ ಏನಾಗುತ್ತಿದೆ ಎಂಬುವುದನ್ನು ನೀವುಗಳೇ ಅರಿಯಬೇಕಿದೆ.
ಪಕ್ಷಕ್ಕೆ ದ್ರೋಹ ಮಾಡಿದವರು ಎಂದಿಗೂ ತಲೆಎತ್ತಿ ಮೆರೆಯಲು ಸಾಧ್ಯವಿಲ್ಲ.ನಮ್ಮ ಪಕ್ಷದಲ್ಲಿ ವ್ಯಕ್ತಿಪೂಜೆಗೆ ಸ್ಥಾನವಿಲ್ಲ ಇಲ್ಲಿ ಪಕ್ಷದ ಸಿದ್ದಾಂತಕ್ಕೆ ಇರುವವರಿಗೆ ಮಾತ್ರ ಸ್ಥಾನಮಾನ ಎಂದ ಅವರು ಈ ಹಿಂದೆ ಜಿಲ್ಲೆ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷ ಎಷ್ಟು ಬಲಿಷ್ಟ ವಾಗಿತ್ತು .ಆದರೆ ಈ ಹಿಂದೆ ಜೆಡಿಎಸ್ ನಾಯಕರ ಜೊತೆ ನಮ್ಮ ನಾಯಕರ ಅಪವಿತ್ರ ಮೈತ್ರಿಯಿಂದ ನಮ್ಮ ಪಕ್ಷ ಸರ್ವನಾಶವಾಗಿತ್ತು.ಮತ್ತೆ ರಾಜ್ಯದಲ್ಲಿ ೧೩೫ ಸ್ಥಾನ ಪಡೆಯುವ ಮೂಲಕ ಸ್ವತಂತ್ರವಾಗಿದ್ದೇವೆ.
ಈಗ ಜೆಡಿಎಸ್ ಬಿಜೆಪಿ ಮೈತ್ರಿಯಿಂದ ೨೮’ಸ್ಥಾನಗೆಲ್ಲುತ್ತೇವೆಂದು ತಿರುಕನ ಕನಸು ಕಾಣುವ ಇವರಿಗೆ ಈ ಮೈತ್ರಿಯಿಂದ ಏನಾಗುತ್ತದೆ ಎಂದು ಕಾದುನೋಡಿ .
ಚುನಾವಣೆ ಸಮೀಪದಲ್ಲಿರುವ ನಮಗೆ ಈ ರೀತಿಯ ಗುಂಪುಗಾರಿಕೆ ಎಷ್ಟರ ಮಟ್ಟಿಗೆ ಸರಿ ಅಲ್ಲದೆ ಲೋಕಸಭಾ ಚುನಾವಣೆ ಬಂದಾಗ ನಾವು ಸಂಘಟನೆ ಮಾಡುತ್ತಿದ್ದೇವೆ ಹಿಂದೆಯೂ ಸಹ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ ಇಂದು ಪಕ್ಷ ಅಧಿಕಾರದಲ್ಲಿತ್ತು ಎಂದವರು. ಇಲ್ಲಿ ರಾಮಚಂದ್ರ ಅವರು ಕಾರ್ಯಕರ್ತರ ಅಭಿಪ್ರಾಯ ಆಲಿಸಲು ಬಂದಿದ್ದಾರೆ.
ಇಲ್ಲಿ ನಾನೇನು ಎಂಪಿ ಚುನಾವಣೆಯ ಅಭ್ಯರ್ಥಿಯಾಗಲು ನಾನು ಬಂದಿಲ್ಲ. ಮುಂದಿನ ಬಾರಿ ಲೋಕಸಭಾ ಚುನಾವಣೆಯನ್ನು ಎಲ್ಲರೂ ಸಹ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಗೆಲುವು ನಮ್ಮದಾಗಲಿದೆ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಜಿತ್ತೇನಹಳ್ಳಿ ರಾಮಚಂದ್ರ ಮಾತನಾಡಿ ನಾನು ಈಗಾಗಲೇ ನಮ್ಮ ಜಿಲ್ಲೆಯ ಎಲ್ಲಾ ಹಿರಿಯ ನಾಯಕರ ಜೊತೆ ಚರ್ಚಿಸಿ ಎಲ್ಲಾ ತಾಲೂಕುಗಳಲ್ಲಿ ಸಭೆ ಮಾಡಿ ಸಂಘಟನೆ ಮಾಡುತ್ತಿದ್ದೇನೆ .ಅದರಂತೆ ಬೇಲೂರಿನಲ್ಲಿ ಶಿವರಾಂ ಅಣ್ಣನವರ ಸಂಘಟನೆಯ ಹಾಗೂ ಅವರ ಶ್ರಮ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದಾರೆ.ಅದರಂತೆ ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ.ಅವರ ಜೊತೆ ಹಾಗೂ ನಿಮ್ಮೆಲ್ಲರ ಸಹಕಾರವನ್ನು ಕೇಳಲು ಬಂದಿದ್ದೇನೆ.
ಇಲ್ಲಿ ವರಿಷ್ಟರು ಯಾರಿಗೆ ಟಿಕೇಟ್ ನೀಡಿದರೂ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ.ಶಿವರಾಂ ರವರ ಸಂಘಟನೆ ನಮ್ಮ ಜಿಲ್ಲೆಗೆ ಬೇಕಾಗಿರುವುದರಿಂದ ಅವರಿಗೆ ಟಿಕೇಟ್ ನೀಡಿದರೆ ನಾವು ಸಹ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ನಂತರ ಕಾಂಗ್ರೆಸ್ ಮುಖಂಡರಾದ ಎಮ್ ಆರ್ ವೆಂಕಟೇಶ್, ವೈಟಿ ಧಾಮೋಧರ್,ಶಾಂತಕುಮಾರ್ ,ಪಾಪಣ್ಣ ಮಾತನಾಡಿ ಇಂದಿನ ಸಭೆ ಲೋಕಸಭಾ ಚುನಾವಣೆಗೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದರ ಬಗ್ಗೆ ಕಾರ್ಯಕರ್ತರ ಅಭಿಪ್ರಾಯವನ್ನು ಆಲಿಸಲು ಸಭೆ ಕರೆಯಲಾಗಿದೆ.ಆದರೆ ಇಲ್ಲಿ ಕೆಲವರು ಸಭೆಯಲ್ಲಿ ಗೊಂದಲಕ್ಕೆ ಕಾರಣರಾಗಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸಂಘಟನೆ ಮಾಡುವಂತವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು.ಇಲ್ಲಿ ನಾವು ಕಳೆದ ಬಾರಿ ಸೋಲಲು ಕಾರ್ಯಕರಿಂದ ನಾವು ಸೋತಿಲ್ಲ ಕೆಲ ನಾಯಕರ ಒಳ ಪಿತೂರಿಇಂದಲೇ ನಾವು ಸೋತಿರುವುದು.ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದಂತ ಕಾರ್ಯಕರ್ತರನ್ನು ಯಾರೂ ಸಹ ಮರೆಯಬೇಡಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಮುಖಂಡರಾದ ಪುನೀತ್ ಕೆಪಿ ಶೈಲೇಶ್,ಪಟೇಲ್ ಶಿವಪ್ಪ,ಬಿ ಎಂ ಸಂತೋಷ್,ಸೈಯದ್ ತೌಫಿಕ್ ಹಾಗೂ ಪುರಸಭೆ ಸದಸ್ಯರು,ಮುಖಂಡರು ಹಾಜರಿದ್ದರು.


