
ಸಕಲೇಶಪುರ : ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ ಅರಣ್ಯ ಸಚಿವರು ನಂತರ ಎಸಳೂರು ತೆಂಕಲಗೋಡು ಮಠಕ್ಕೆ ಭೇಟಿ ನೀಡಿದಾಗ ಮನವಿ ಸಲ್ಲಿಸಿದ ಬಜರಂಗದಳ ಕಾರ್ಯಕರ್ತರು
04.12.23 ರಂದು ಸಕಲೇಶಪುರದ ಎಸಳೂರು ಹೋಬಳಿ ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ನಡೆದ 8 ಬಾರಿ ದಸರಾ ಅಂಬಾರಿ ಹೊತ್ತ ಅರ್ಜುನನ ದಾರುಣ ಹತ್ಯೆ ಬಗ್ಗೆ ಹಲವು ಅನುಮಾನವಿದ್ದು ಅರವಳಿಕೆ ಮದ್ದು ಮತ್ತು ಅರ್ಜುನನಿಗೆ ಗುಂಡು ಹೊಡಿದಿದ್ದರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಮನವಿ ಮಾಡಲಾಯಿತು.
*ಸಾಕಾನೆ ಮಾವುತರಿಗೆ ಅರವಳಿಕೆ ಚುಚ್ಚು ಮದ್ದು ಹೊಡಿಯುವ ತರಬೇತಿ ಆಗಬೇಕು ಮತ್ತು ಸಾಕಾನೆಗಳು ಕಾಡಾನೆಯನ್ನು ಪಳಗಿಸುವ ಸುಲಭ ವಿಧಾನಗಳನ್ನು ಮಾವುತರಿಗೆ ತರಬೇತಿ ನೀಡಬೇಕು ಎಂದು ಆಗ್ರಹಿಸಲಾಯಿತು.
ಮಾನ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಮನವಿಗೆ ಸ್ಪಂದಿಸಿ ಕ್ರಮ ಕೈಗೊಳ್ಳದಾಗಿ ಭರವಸೆ ನೀಡಿದರು…
ಈ ಸಂದರ್ಭದಲ್ಲಿ ಯಸಳೂರು ತೆಂಕಲಗೂಡು ಮಠದ ಸ್ವಾಮೀಜಿಗಳು,ಉಪಸ್ಥಿತಿ ಇದ್ದರು.ಬಜರಂಗದಳದ ಜಿಲ್ಲಾ ಸಹ ಸಂಯೋಜಕ ಕೌಶಿಕ್ , ವಿ ಹೆಚ್ ಪಿ ನಗರಾಧ್ಯಕ್ಷ ದಿಲೀಪ್ ಬಜರಂಗದಳ ಮುಖಂಡರಾದ ಸಂತೊಷ್ ಬಿ.ಜೆ.ಪಿ ಮುಖಂಡರಾದ ಲೋಹಿತ್ ಕೌಡಳ್ಳಿ ಮಾಜಿ ಸೈನಿಕ ಉದಯ್ ಹೇನ್ನಲಿ, ಪ್ರಸಾದ್ ಹೊಸಕೋಟೆ, ಬಿಜೆಪಿ ಆನಂದ್ ಇತರರು ಇದ್ದರು.


