ಹಾಸನ : ನಗರದ ಶ್ರೀಚನ್ನಕೇಶವ ದೇವಸ್ಥಾನದ ಬಳಿ ಇರುವ ತೇರಾಪಂಥ್ ಪ್ರೊಫೆಷನಲ್ ಫೋರಂನಿಂದ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ಚಿಕಿತ್ಸಾ ಶಿಬಿರವನ್ನು ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಜೆ. ಗೌಡ ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.

ನಂತರ ಉದ್ದೇಶಿಸಿ ಮಾತನಾಡಿದ ಅವರು, ಬೆಳಿಗ್ಗೆ ಎದ್ದರೇ ಸಾಕು ಅವರವರ ಕೆಲಸದಲ್ಲಿ ಬ್ಯುಸಿ ಆಗುವ ನಾವು ವೈಜ್ಞಾನಿಕ ಜೀವನದಡಿ ಆರೋಗ್ಯದ ಕಡೆ ಹೆಚ್ಚು ಆಸಕ್ತಿ ತೋರಿಸದೇ ಸಮಸ್ಯೆ ಬಂದಾಗ ನಾವು ವೈದರ ಬಳಿ ಹೋಗುತ್ತೇವೆ .ಆದರೇ ಸಮಯ ಇದ್ದ ವೇಳೆ ನಮಗೆ ಏನು ಆಗಿಲ್ಲವೆಂದು ಪರೀಕ್ಷೆ ಮಾಡಿಸಲು ಬಂದಂತಹ ಸಮಯದಲ್ಲಿ ಆರೋಗ್ಯದ ಏರುಪೇರಿನ ಬಗ್ಗೆ ಮಾಹಿತಿ ಸಿಗಲಿದೆ. ಮನುಷ್ಯನ ಜೀವವನ್ನು ಉಳಿಸಲು ಇಂತಹ ಮೆಘ ಹೆಲ್ತ್ ಕ್ಯಾಂಕ್ ಸಹಕಾರಿಯಾಗಿದೆ ಎಂದರು. ಇದುವರೆಗೂ ಅನೇಕ ವೈದ್ಯಕೀಯ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ್ದೇನೆ. ಅತ್ಯಂತ ವ್ಯವಸ್ಥಿತವಾಗಿ ಇಲ್ಲಿ ಆಯೋಜನೆ ಮಾಡಲಾಗಿದೆ. ತೇರಾಪಂಥ್ ಪ್ರೊಫೆಷನಲ್ ಫೋರಂ ಪ್ರಾರಂಭವಾಗಿ ಮೂರು ವರ್ಷ ಕಳೆದಿದ್ದು, ಮೊದಲ ಬಾರಿಗೆ ಇಂತಹ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಉತ್ತಮವಾಗಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಶ್ರೀ ಮಂಜುನಾಥೇಶ್ವರ ಆಯುರ್ವೇದಿಕ್ ಆಸ್ಪತ್ರೆ ಮತ್ತು ಕಾಲೇಜು ಪ್ರಾಂಶುಪಾಲರಾದ ಪ್ರಸನ್ನ ಎನ್. ರಾವ್ ಮತ್ತು ಶೈಲಜಾ ಅವರು ಮಾತನಾಡಿ, ಜೀವನದ ಉದ್ದಲಕ್ಕೂ ಗಳಿಸುವುದು ಗೌರವ. ಇಂತಿಷ್ಟು ಧನ, ಸೌಲಭ್ಯಗಳು ಹಾಗೂ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಲೈಫ್ ಶೈಲಿಯು ಕೂಡ ಆರೋಗ್ಯ ಸೇರಿದೆ. ಪ್ರಸ್ತೂತ ಮಾನಸಿಕ ಖಾಯಿಲೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಪ್ರತಿನಿತ್ಯ ಯೋಗಾ ಮತ್ತು ಆಯುರ್ವೇದದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತರಾದ ಸತೀಶ್ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕರಾದ ಶಬ್ಬೀರ್ ಅಹಮದ್, ತೇರಾಪಂಥ್ ಪ್ರೊಫೆಷನಲ್ ಫೋರಂ ಅಧ್ಯಕ್ಷ ಭರತ್ ಬನ್ಸಾಲಿ, ಮಲ್ನಾಡ್ ತೇರಾಪಂಥ್ ಸಮಿತಿ ಅಧ್ಯಕ್ಷ ಮಹಾವೀರ್ ಭನ್ಸಾಲಿ, ಉಪಾಧ್ಯಕ್ಷ ಸುರೇಶ್ ಕಾತೇಡ್, ಗೌರವಾಧ್ಯಕ್ಷ ಮಂಗಿಲಾಲ್, ಮುಖೇಶ್, ಸುರಾನಾ, ಕೌಶಲ್ಯ, ತಾತೇಡ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *