ಹಾಸನ: ನನ್ನ ಆರೋಗ್ಯದಲ್ಲಿ ವ್ಯತ್ಯಾಸ ಇದ್ದರೂ ರೈತರ ವಿಚಾರದಲ್ಲಿ ಸರಕಾರದ ಕಣ್ಣು ತೆರೆಸಲು ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗವುದು. ಇನ್ನು ಬಿಜೆಪಿ ಜೊತೆ ಮೈತ್ರಿ ಇದೆ ಎಂದು ಯಾವ ಮೃಧು ದೋರಣೆ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ವಿಧಾನಸಭೆಯಲ್ಲಿ ನಡೆದ ಪ್ರಸಂಗದ ಮೇಲೆ ಕೇಂದ್ರ ಸರ್ಕಾರದ ನಫೆಡ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.

ಪ್ರತಿ ಜನವರಿಯಿಂದ ಆರು ತಿಂಗಳು ಖರೀದಿ ಮಾಡುವ ಪ್ರಕ್ರಿಯೆ. ಕಳೆದ ವರ್ಷವೂ ನಫೆಡ್ ಮೂಲಕ ಆರು ತಿಂಗಳು ಬೆಂಬಲ ಬೆಲಯೊಂದಿಗೆ ಖರೀದಿ ಮಾಡಲಾಗಿತ್ತು. ಖರೀದಿ ಮಾಡುವಾಗ ಕೊಬ್ಬರಿ ಕ್ವಾಲಿಟಿ ಬಗ್ಗೆ ರೈತರಿಗೆ ಮನವರಿಕೆ ಮಾಡಿದ್ದಾರೆ. ಸುಮಾರು ೫೦ ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ವಿಂಟಾಲ್ ಗೆ ೧೫ ಸಾವಿರ ಹಣ ಕೊಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದರು.ಸದನದಲ್ಲಿ ರೇವಣ್ಣ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಈ ಹಿಂದೆ ಖರೀದಿ ಆಗಿದ್ದ ಕೊಬ್ಬರಿಗೆ ಸಹಾಯ ಧನವನ್ನ ರಾಜ್ಯ ಸರ್ಕಾರ ನೀಡುತ್ತಿಲ್ಲ. ಮುಂದೆ ಖರೀದಿ ಮಾಡೋದಕ್ಕೆ ೧೨೫೦ರೂ ನೀಡಲು ತೀರ್ಮಾನಿಸಿದ್ದಾರೆ. ಇದು ಒಟ್ಟು ಕೇವಲ ೬೦ ಕೋಟಿ ಆಗೋದಿಲ್ಲ. ಕೇಂದ್ರಕ್ಕೆ ಕೊಬ್ಬರಿ ಮಾರಾಟದಿಂದ ೫೯೫ ಕೋಟಿ ಹಣ ಬೇಕು. ಕೊಬ್ಬರಿ ವಹಿವಾಟಿನಲ್ಲಿ ಕೇಂದ್ರಕ್ಕೆ ಮನ್ನೂರು ಕೋಟಿ ನಷ್ಟ ಆಗುತ್ತದೆ. ಇದು ಕೇಂದ್ರ, ರಾಜ್ಯಕ್ಕೆ ದೊಡ್ಡ ಮೊತ್ತವೇನಲ್ಲ. ನಾಳಿನ ಸದನದಲ್ಲಿ ಈ ಬಗ್ಗೆ ನಮ್ಮ ಶಾಸಕರ ಜೊತೆ ಚರ್ಚಿಸುತ್ತೇನೆ.

ನನ್ನ ಆರೋಗ್ಯ ಸರಿ ಇಲ್ಲವಾದ್ರೂ ಪರವಾಗಿಲ್ಲ. ರೈತರಿಗೆ ಅನುಕೂಲ ಆಗೋದಾದ್ರೆ ಸರ್ಕಾರದ ಕಣ್ಣು ತೆರೆಸಬೇಕಾದ್ರೆ, ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ ಮಾಡುತ್ತೇನೆ. ಎನ್‌ಡಿಎ ಸೇರಿದ್ದೇವೆ ಎಂದು ನಾವು ಮೃದು ಧೋರಣೆ ತೋರುವುದಿಲ್ಲ. ನಾನೇ ಅಧಿಕಾರಲ್ಲಿ ಇದ್ದಿದ್ರೆ, ರೈತರಿಗೆ ೧೫ ಸಾವಿರ ಬೆಂಬಲ ಬೆಲೆ ನೀಡುತ್ತಿದ್ದೇವು. ನಮ್ಮ ರೈತರಿಗೆ, ಜನಕ್ಕೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ನಾನು ಮುಖ್ಯಮಂತ್ರಿ ಆದಾಗ ಕೊಬ್ಬರಿಗೆ ಬೆಂಬಲವಾಗಿ ೧೮೦ ಕೋಟಿ ಹಣ ಕೊಟ್ಟೆ. ಈರುಳ್ಳಿ, ಕೊಬ್ಬರಿ, ಟೊಮ್ಯಾಟೊಗೆ ಬೆಂಬಲ ಬೆಲೆ ನೀಡಿದ್ದೇನೆ. ಈಗಲೂ ಸರ್ಕಾರ ರೈತರ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕು. ಎಚ್ಚರಿಡುವ ಕೆಲಸವನ್ನೂ ನಾವು ಮಾಡುವ ರೂಪುರೇಷೆ ತಯಾರಿಸುತ್ತೇವೆ.

ಈ ರಾಜ್ಯ ಉದ್ಧಾರ ಆಗಬೇಕಾದ್ರೆ ಜಾತಿಗಣತಿ ಬೇಕಿಲ್ಲ. ಆರ್ಥಿಕ ಸಮೀಕ್ಷೆ ಆಗುವಂತೆ ಮಾಡುವ ಕೆಲಸ ಆಗಲಿ. ಅದನ್ನ ಬಿಟ್ಟು ಜಾತಿ ಜಾತಿಗಳ ನಡುವೆ ಹೊಡೆದಾಡಿಸುವ ಕೆಲಸ ಯಾಕೆ? ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ಕೊಡ್ತೀವಿ ಅಂತೀರಾ ಕೊಡಿ ಬೇಡ ಅನ್ನೊಲ್ಲ. ಆದ್ರೆ ಹಿಂದುಳಿದ ಹಿಂದೂಗಳಿಗೆ ಏನು ಕೊಡ್ತೀರಾ? ಇದರಲ್ಲೂ ಲೂಟಿ ಹೊಡಿಯಿಯೋದಕ್ಕೆ ಪ್ಲಾನ್ ಇದೆಲ್ಲಾ. ನನಗೆ ಹೇಗೆ ಕಮಿಷನ್ ಹೊಡೆಯುತ್ತಾರೆ ಗೊತ್ತಿದೆ. ಹೀಗೆ ಹಣ ಹಂಚೋದಾದ್ರೆ ರೈತರಿಗೆ ಏನು ಕೊಡ್ತೀರಿ ಎಂದು ಪ್ರಶ್ನಿಸಿದರು.

ಕೆಂಪಣ್ಣ ಹೇಳಿದ್ದಾರಲ್ಲ ಇವರ ಸರ್ಕಾರದಲ್ಲೂ ಕಮಿಷನ್ ನಡೆಯುತ್ತಿದೆ ಎಂದು.ಇವರು ಅಧಿಕಾರಕ್ಕೆ ಬಂದು ಮಾಡಿದ್ದೇನು? ಬಿಜೆಪಿ ಮೇಲೆ ಕಮಿಷನ್ ಆರೋಪದಿಂದ ಅಧಿಕಾರಕ್ಕೆ ಬಂದು ಇವರೇನು ಮಾಡಿದ್ರು ಎಂದು ಪ್ರಶ್ನೆ ಮಾಡಿ ಟಾಂಗ್ ನೀಡಿದರು.

ರಾಜ್ಯ ಸರ್ಕಾರವು ಪ್ರತಿನಿತ್ಯವು ೫ ಗ್ಯಾರೆಂಟಿ ಬಗ್ಗೆಯೇ ತಮಟೆ ಹೊಡೆದುಕೊಂಡು ಹೋಗುತ್ತಿದ್ದಾರೆ.

ಆ ಪ್ರಚಾರ ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಮಾಧ್ಯಮಗಳಿಗೆ ನೀಡಬೇಕಾದ ೧೪೦ ಕೋಟಿ ಜಾಹಿರಾತು ಹಣ ಕೂಡ ಇನ್ನು ನೀಡಿಲ್ಲ. ಐಶಾರಾಮಿ ಕಾರು, ಮನೆ ರಿನವೇಷನ್ ಗೆ ಕೋಟ್ಯಾಂತರ ರೂ ಕಳೆಯುತ್ತಿದ್ದಾರೆ. ಅದನ್ನ ಬಿಟ್ಟರೆ ರೈತರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ. ನನ್ನ ಪಂಚರತ್ನ ಕಾರ್ಯಕ್ರಮ ಉದ್ದೇಶದಲ್ಲಿ ಪ್ರತಿ ಕುಟುಂಬಕ್ಕೆ ಶಕ್ತಿ ನೀಡುತ್ತಿತ್ತು.

ಅಕ್ಕಿ ದರ ನೂರರ ಗಡಿ ದಾಟುವ ಹಂತದಲ್ಲಿದೆ. ಅನ್ನಭಾಗ್ಯದ ಅಕ್ಕಿ ಬದಲು ಹಣ ನೀಡುತ್ತಿದ್ದಾರೆ. ಅದನ್ನೂ ಯಾರು ಯಾರಿಗೆ ಕೊಟ್ಟಿದ್ದಾರೊ ಗೊತ್ತಿಲ್ಲ.ಮುಂದೆ ೮೦ರೂ ಅಕ್ಕಿ ಖರೀದಿಸಬೇಕಾದ್ರೆ ಎಲ್ಲಿ ಅಕ್ಕಿ ತರ್ತಾರೆ? ಶಕ್ತಿ ಯೋಜನೆಯಲ್ಲಿ ಹೆಣ್ಣುಮಕ್ಕಳು ಸ್ವಾತಂತ್ರದಿಂದ ಓಡಾಡ್ತಿದ್ದಾರೆ. ಆದ್ರೆ ಸಾರಿಗೆ ಇಲಾಖೆಗೆ ಇನ್ನೂ ಹಣವೇ ಸಂದಾಯ ಆಗಿಲ್ಲ. ಸಾರಿಗೆ ಸಿಬ್ಬಂದಿಯನ್ನ ದಿನಗೂಲಿಯಲ್ಲಿ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇವೆಲ್ಲವೂ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಬಿ.ಕೆ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಗುದ್ದಾಟ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಬಿ.ಕೆ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಮಾತ್ರ ಯಾಕೆ ಹೇಳ್ತೀರಿ, ಅಲ್ಲಿ ಇನ್ನೂ ಅನೇಕರಿದ್ದಾರೆ. ಮುಂದೆ ಎಲ್ಲಾ ಧ್ವನಿ ಹೊರ ಬರುತ್ತದೆ. ಕೇಂದ್ರ ಸರ್ಕಾರದ ಬಳಿ ಹೋಗಿ ೫೦ ಜನ ಕರ್ಕೊಂಡ್ ಬರ್ತೀವಿ ಎಂದು ಹೊರಟಿದ್ದಾರೆ. ಅವರ ಹಗರಣಗಳನ್ನ ಮುಚ್ಚಿ ಹಾಕಿಕೊಳ್ಳೋದಕ್ಕೆ ಹೋಗಿದ್ದಾರೆ. ಇಂದು ಹರಿಪ್ರಸಾದ್ ರನ್ನ ಹೊರತುಪಡಿಸಿ ಒಂದು ಸಮಾವೇಶ ಮಾಡ್ತಿಲ್ವಾ, ಎಲ್ಲವೂ ನನಗೆ ಗೊತ್ತಿದೆ ಎಂದರು. ಬರಗಾಲದ ಹಿನ್ನಲೆ ವಿದಸಾನಸಭಾ ಕಲಾಪ ನಡೆಯುತ್ತಿದೆ.

ಹಲವಾರು ಶಾಸಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂಬುದನ್ನೂ ಪ್ರಸ್ತಾಪ ಮಾಡಿದ್ದಾರೆ. ತುಮಕೂರು, ಹಾಸದಲ್ಲಿ ಬೆಳೆಯುವ ಕೊಬ್ಬರಿ ಬೆಲೆ ಶೇಕಡ ೫೦ ಕ್ಕಿಂತ ಕಡಿಮೆಯಾಗಿದೆ.

ಕಳೆದ ಒಂದು ವರ್ಷದಿಂದ ಬೆಲೆ ಕುಸಿತ ಕಂಡಿದೆ. ತೆಂಗು ಬೆಳೆಗಾರರ ಕಷ್ಟ ನಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂಬ ಬೇಡಿಕೆ ನಡೀತಿದೆ. ವಿಧಾನ ಸಭೆಯಲ್ಲಿ ಚರ್ಚೆ ನಡೆದಾಗ ಕಾಂಗ್ರೆಸ್ ನವರು ಕೇಂದ್ರದ ಮೇಲೆ ವಿರೋಧ ಪಕ್ಷ ಒತ್ತಡ ತರಬೇಕು ಎನ್ನುತ್ತಿದ್ದಾರೆ.

ಎನ್‌ಡಿಎ ಭಾಗವಾದ ಜೆಡಿಎಸ್ ದೇವೇಗೌಡರ ನೇತೃತ್ವದಲ್ಲಿ ಕೇಂದ್ರದ ಗಮನಕ್ಕೆ ತರಬೇಕು ಎಂದಿದ್ದಾರೆ. ನಮ್ಮ ಜಿಲ್ಲೆಯ ಕಾಂಗ್ರೆಸ್ ಶಾಸಕರೊಬ್ಬರು ಮಾತನಾಡುತ್ತಿದ್ದು, ಸದನದಲ್ಲಿ ನಮ್ಮ ಜಿಲ್ಲೆಯ ಶಾಸಕರ ಹೋರಾಟವನ್ನ ನಾನು ಕಂಡಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವಿರುದ್ಧ ಲೇವಡಿಯಾಗಿ ಮಾತನಾಡಿದರು.

ಇದೆ ವೇಳೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *