ಸಕಲೇಶಪುರ : ದಿನಾಂಕ 11-12-23 ನೇ ಸೋಮವಾರ ಶ್ರೀ ಗುಹೆಕಲ್ಲಮ್ಮ ದೇವಿಯವರ ಕಾರ್ತಿಕ ಪೂಜಾ ಮಹೋತ್ಸವವು ಬಹಳ ಅದ್ದೂರಿಯಾಗಿ ನಡೆಯಿತು

ಪವಿತ್ರ ಹೇಮಾವತಿ ದಡದಲ್ಲಿ ಗಂಗೆ ಪೂಜೆ, ವಾದ್ಯ,ಕಳಸದೊಂದಿಗೆ ಶ್ರೀ ಗುಹೆಕಲ್ಲಮ್ಮ ದೇವತೆಯವರ ಮುಖವಾಡದೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯೊಂದಿಗೆ ಹಾಗೂ ಪಟಾಕಿ ಸಿಡಿಸಿ ಸಂಭ್ರಮದಿಂದ ದೇವಸ್ಥಾನಕ್ಕೆ ಆಗಮಿಸಿ ನಂತರ ದೇವಿಯವರಿಗೆ ಮುಖವಾಡ ಅಲಂಕರಿಸಿ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು

ನಂತರ ಬಂದಂತಹ ಭಕ್ತಾದಿಗಳಿಗೆ ಮಹಾ ಅನ್ನ ಸಂತರ್ಪಣೆ ನಡೆಯಿತು

ಈ ಪೂಜಾ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ದೇವಿಯವರ ಕೃಪೆಗೆ ಪಾತ್ರರಾದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *