
ಸಕಲೇಶಪುರ : ಕಳೆದ ಒಂದು ವಾರದಿಂದ ಮಾವಿನಹಳ್ಳಿ ಗ್ರಾಮದಲ್ಲಿ ದನಗಳು, ಕುರಿಗಳು, ಹಾಗೂ ನಾಯಿಗಳನ್ನು ಹಿಡಿಯುತ್ತಿದ್ದ ಚಿರತೆ ಇಲ್ಲಿನ ಸುತ್ತಮುತ್ತ ಗ್ರಾಮಸ್ಥರಿಗೆ ಭಯ ಉಂಟುಮಾಡಿದ್ದ ಚಿರತೆ ಇಂದು ಸಂಜೆ ಕತ್ತಲೆಯಾಗುವ ವೇಳೆ ಗ್ರಾಮದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಚಿರತೆ ಗ್ರಾಮದಲ್ಲಿ ಇದೆಯೋ ಇಲ್ಲವೋ ಎಂಬ ಅನುಮಾನ ಇದೀಗ ದೃಡವಾಗಿದ್ದು ಮತ್ತಷ್ಟು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದ್ದು ಕೂಡಲೇ ಚಿರತೆಯನ್ನು ಹಿಡಿದು ಸ್ಥಳಾಂತರಿಸದಿದ್ದರೆ ಅರಣ್ಯ ಇಲಾಖೆಯ ವಿರುದ್ದ ಪ್ರತಿಬನಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರಾದ ರವೀಂದ್ರ TV46 ಮಲೆನಾಡು ಚಾನಲ್ ಗೆ ತಿಳಿಸಿದ್ದಾರೆ.
