ಹಾಸನ: ಇದೆ ತಿಂಗಳು ದಾವಣಗೆರೆಯಲ್ಲಿ ನಡೆಯುವ ೨೪ನೇ ಮಹಾ ಅಧಿವೇಶನಕ್ಕೆ ಹಾಸನ ಜಿಲ್ಲೆಯಿಂದ ೮ ಸಾವಿರಕ್ಕೂ ಹೆಚ್ಚು ಜನ ಪ್ರಯಾಣ ಬೆಳೆಸುವುದಾಗಿ ಮಂಗಳವಾರ ನಡೆದ ವೀರಶೈವ-ಲಿಂಗಾಯತ ಜಿಲ್ಲಾ ಘಟಕದ ಸಭೆಯಲ್ಲಿ ಚರ್ಚಿಸಲಾಯಿತು.

ನಗರದ ಜವೇನಹಳ್ಳಿ ಮಠದಲ್ಲಿ ಕರೆದಿದ್ದ ವೀರಶೈವ-ಲಿಂಗಯತ ಸಭೆಯಲ್ಲಿ ಅಧಿವೇಶನದ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸಲಹೆಗಳ್ನು ಸ್ವೀಕರಿಸಿ ನಿರ್ಧರಿಸಲಾಯಿತು.

ಅಖಿಲ ಭಾರತ ವೀರಶೈವ-ಲಿಂಗಯತ ಮಹಾಸಭಾದ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಮತ್ತು ಮಾಜಿ ಶಾಸಕ ಬಿ.ಆರ್. ಗುರುದೇವ್ ಸಭೆಯಲ್ಲಿ ಸಲಹೆಗಳನ್ನು ಸ್ವೀಕರಿಸಿ ಸೂಚಿಸಿ ಮಾತನಾಡಿದ ಅವರು, ಡಿಸೆಂಬರ್ ೨೩ ಮತ್ತು ೨೪ ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ನೇ ಮಹಾ ಅಧಿವೇಶನವು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ.

ಸುತ್ತೂರು ಜಗದ್ಗೂರುಗಳು ಅಧಿವೇಶನದ ಉದ್ಘಾಟನೆ ನೆರವೇರಿಸಲಿದ್ದಾರೆ. ನಾಡಿನ ಎಲ್ಲಾ ಮಹಾ ಸ್ವಾಮೀಜಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು, ಕೃಷಿಕರು, ಕಲಾತಮಡಗಳು, ಕವಿಗಳು ಹಾಗೂ ಸಾಂಸ್ಕೃತಿಕ ರಾಯಬಾರಿಗಳು ಭಾಗವಹಿಸಲಿದ್ದಾರೆ.

ಇದೆ ವೇಳೆ ವಿಚಾರಗೋಷ್ಠಿಗಳು, ಮಹಿಳಾ ಗೋಷ್ಠಿಗಳು, ಯುವ ಗೋಷ್ಠಿಗಳು ಹಾಗೂ ಕೈಗಾರಿಕ, ವಾಣಿಜ್ಯ, ಕೃಷಿಗೆ ಸಂಬಂಧಿಸಿದ ಗೋಷ್ಠಿಗಳು, ಶಿಕ್ಷಣಕ್ಕೆ ಸಂಬಂಧಿಸಿದ ಗೋಷ್ಠಿಗಳು ಮತ್ತು ವಸ್ತು ಪ್ರದರ್ಶನಗಳು ಇರುತ್ತದೆ ಎಂದರು. ನಾಡಿನಾಧ್ಯಂತ ೫ ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಲ್ಳುವ ನಿರೀಕ್ಷೆಯಿದೆ.

ಬಂದವರಿಗೆ ಯಾವ ಸಮಸ್ಯೆ ಆಗದಂತೆ ಊಟ, ವಸತಿ ವ್ಯವಸ್ಥೆಯನ್ನು ದಾವಣಗೆರೆಯಲ್ಲಿ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ಬಸ್ಸಿನ ವ್ಯವಸ್ಥೆ ಕೂಡ ಮಾಡಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿ ಬೇಕಾದಲ್ಲಿ ತಾಲೂಕು ಅಧ್ಯಕ್ಷರನು ಸಂಪರ್ಕಿಸಿ ಪಡೆಯಬಹುದಾಗಿದೆ. ಎರಡನೇ ದಿನದ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಗದೀಶ್ ಶೆಟ್ಟರ್, ಬಸವರಾಜು ಬೊಮ್ಮಾಯಿ ಹಾಗೂ ಮಾಜಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಈಗಿನ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಅಧಿವೇಶನಕ್ಕೆ ಜಿಲ್ಲಾ ಘಟಕದಿಂದ ಸುಮಾರು ೮ ಸಾವಿರ ಜನರು ಇಲ್ಲಿಂದ ದಾವಣಗೆರೆಗೆ ಪ್ರಯಾಣ ಬೆಳೆಸುವುದಾಗಿ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಮಾಜಿ ಶಾಸಕ ಬಿ.ಆರ್. ಗುರುದೇವ್, ರಾಜ್ಯ ಉಪಾಧ್ಯಕ್ಷೆ ಪಾರ್ವತಿ ಕರಂಡಿ, ರಾಜ್ಯ ಸಮಿತಿ ಸದಸ್ಯೆ ಗುರುನಾಥ್, ಜಿಲ್ಲಾ ಘಟಕದ ಸುಧಾ ವಿನೋದ್, ಅನುಫ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಶೋಭನ್ ಬಾಬು, ರವಿಕುಮಾರ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *