
ಆಲೂರು : ತಾಲ್ಲೂಕಿನ ಕಿರಗಡಲು ಗ್ರಾಮದಲ್ಲಿ ಶ್ರೀ ಪಂಚಲಿಂಗ ದೇವರುಗಳಿಗೆ ಹೂವಿನ ಅಲಂಕಾರದೊಂದಿಗೆ ವಿಶೇಷಪೂಜೆ ಜೋತೆಗೆ ಶ್ರೀ ಪಂಚಲಿಂಗೇಶ್ವರ ಸ್ವಾಮಿ ಅಡ್ಡೆ ಪಲ್ಲಕ್ಕಿ ಉತ್ಸವವನ್ನು ಸಡಗರ ಸಂಭ್ರಮ ಹಾಗು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಅಭಿಷೇಕ, ಆಲಂಕಾರ, ಮಹಾಮಂಗಳಾರತಿ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಯಗಚಿ ನದಿಯ ದಂಡೆಯಿಂದ ದೇವರುಗಳಿಗೆ ಗಂಗಸ್ಥಾನ ಪೂಜೆ,ನಂದಿಧ್ವಜ ಕುಣಿತದೊಂದಿಗೆ ವಾದ್ಯಗೋಷ್ಠಿ ಮುಖಾಂತರ ಬರಮಾಡಿಕೊಂಡುಅಗ್ನಿ ಕೆಂಡೋತ್ಸವವನ್ನು ನಡೆಸಲಾಯಿತು.
ನಂತರ ಗ್ರಾಮಸ್ಥರಾದ ರುದ್ರೇಗೌಡ ಮಾತಾನಾಡಿ ಕಿರಗಡಲು ಗ್ರಾಮದಲ್ಲಿ ಶ್ರೀ ಪಂಚಲಿಂಗೇಶ್ವರ ಸ್ವಾಮಿ ಉದ್ಭವಗೊಂಡಿದ್ದು ಈ ಗ್ರಾಮದಲ್ಲಿ ಐದು ಪಂಚಲಿಂಗಗಳನ್ನು ಒಂದೇ ಜಾಗದಲ್ಲಿ ಕಾಣಬಹುದಾಗಿದೆ
ಈ ದೇವಾಲಯವು ಚೋಳರ ಕಾಲದಿಂದಲೇ ಇದ್ದು ಇದರ ಇತಿಹಾಸ ಹಿನ್ನೆಲೆ ಎಂದರೆ ಈ ಹಿಂದೆ ಈ ಸ್ಥಳ ದಟ್ಟವಾದ ಅರಣ್ಯ ಪ್ರದೇಶಗಳಿಂದ ಕೂಡಿದ್ದು ಇಲ್ಲಿ ಜಾನುವಾರುಗಳು ಮೇಯಲು ಮಾತ್ರ ಯೋಗ್ಯವಾಗಿತ್ತೇ ಹೊರೆತು ವ್ಯವಸಾಯ ಮಾಡಲು ಯೋಗ್ಯವಾದ ಸ್ಥಳವಾಗಿರಲಿಲ್ಲ ಹಿಂದೆ ದನ ಕರುಗಳನ್ನು ಮೇಯಿಸುವಂಥ ಯಜಮಾನ ಸುಮಾರು 40 ರಿಂದ 50 ರಾಸು ದನಕರುಗಳನ್ನು ಮೇಹಿಸುತ್ತಿದ್ದ ಸಂದರ್ಭದಲ್ಲಿ ಒಂದು ರಾಸು ಕರುವನ್ನು ಹಾಕಿತ್ತು ಆ ಹಸು ಮನೆಯಲ್ಲಿ ಹಾಲನ್ನು ಕೊಡದೆ ಕರುವಿಗೂ ಹಾಲನ್ನು ಉಣಿಸದೆ ಸಂಜೆ ಸಮಯದಲ್ಲಿ ಈಗ ನಿರ್ಮಾಣಗೊಂಡಿರುವ ಜಾಗದಲ್ಲಿ ಒಂದು ಬಿದಿರು ಮರದ ಹತ್ತಿರ ಹಾಲನ್ನು ನೀಡುವಂಥಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು, ಇದನ್ನು ಗಮನಿಸಿದ ಧನ ಮೇಹಿಸುವ ಯಜಮಾನ ಅದನ್ನು ಶಾಸ್ತ್ರೋತ್ಸವಾಗಿ ತಿಳಿದುಕೊಂಡು ಗ್ರಾಮದಲ್ಲಿ ಪಂಚಲಿಂಗೇಶ್ವರ ಉದ್ಭವಗೊಳ್ಳುವ ಸೂಚನೆ ಇದೆಯೆಂದು ತಿಳಿಸುತ್ತಾರೆ ಆಗ ಆ ಜಾಗದಲ್ಲಿ ಕಾಡನ್ನು ತೆರೆವುಗೊಳಿಸುವ ಸಂದರ್ಭದಲ್ಲಿ ಒಂದು ಲಿಂಗಕ್ಕೆ ಪೆಟ್ಟು ಬಿದ್ದಿರುವಂತಹ ಸನ್ನಿವೇಷವನ್ನು ಈಗಲೂ ಕಾಣಬಾವುದಾಗಿದೆ ಎಂದು ತಿಳಿಸಿ ನಂತರ ಈ ಜಾಗವನ್ನು ಪುಣ್ಯಸ್ಥಳವಾಗಿ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ.
ಈ ಕಿರಗಡಲು ಗ್ರಾಮದಲ್ಲಿ ಈ ಸುಂದರವಾದ ದೇವಸ್ಥಾನ ನೆಲೆಯಾಗಿ ನಿಲ್ಲಲು ಕಬ್ಬಿನಹಳ್ಳಿ ಜಗದೀಶ್ ಅವರು ಪ್ರಮುಖ ಕಾರಣ ಹಾಗೂ ಕೆ, ಎಸ್ ಮಂಜೇಗೌಡರ ನೆರವಿನಿಂದ ದೇವಸ್ಥಾನ ಈ ದೊಡ್ಡ ಮಟ್ಟಕ್ಕೆ ತಲುಪಿದೆ ಯೆಂದರು,ಈ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಉತ್ಸವವನ್ನು ಕಣ್ತುಂಬಿಕೊಂಡು ತಮ್ಮ ಭಕ್ತಿ ಭಾವ ಮೆರೆದರು,ಸರ್ವ ಜನರೂ ಸೇರಿ ಆಚರಿಸಿದ ಜಾತ್ರೆ ಮಹೋತ್ಸವಕ್ಕೆ ಸುತ್ತಮುತ್ತಲಿನ ಜನರು ಸೇರಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಹರಿದು ಬಂದಿದ್ದು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತಾದಿಗಳಿಗೆ ತೀರ್ಥ ಸೇರಿದಂತೆ ವಿವಿಧ ಬಗೆಯ ಪ್ರಸಾದವನ್ನು ನೀಡಲಾಯಿತು.










