
ಸಕಲೇಶಪುರ : ಕಳೆದ ಒಂದು ವಾರದಿಂದ ಮಾವಿನಹಳ್ಳಿ ಗ್ರಾಮದಲ್ಲಿ ದನಗಳು, ಮೇಕೆಗಳು, ಹಾಗೂ ನಾಯಿಗಳನ್ನು ಹಿಡಿಯುತ್ತಿದ್ದ ಚಿರತೆ ಇಲ್ಲಿನ ಸುತ್ತಮುತ್ತ ಗ್ರಾಮಸ್ಥರಿಗೆ ಭಯ ಉಂಟುಮಾಡಿದ್ದ ಚಿರತೆ ಇಂದು ಸಂಜೆ ಕತ್ತಲೆಯಾಗುವ ವೇಳೆ ಗ್ರಾಮದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿರತೆ ಗ್ರಾಮದಲ್ಲಿ ಇದೆಯೋ ಇಲ್ಲವೋ ಎಂಬ ಅನುಮಾನ ಇದೀಗ ದೃಡವಾಗಿದ್ದು ಮತ್ತಷ್ಟು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದ್ದು ಇಂದು ಪರಿಸರವಾದಿಗಳಾದ ವಿಕ್ರಂ ಅವರು ಮಾವಿನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ನಾನೂ ಕೂಡ ಅರಣ್ಯ ಇಲಾಖೆಗೆ ಚಿರತೆಯನ್ನು ಕೂಡಲೇ ಹಿಡಿದು ಸ್ಥಳಾಂತರಿಸುವಂತೆ ತಿಳಿಸುತ್ತೇನೆ ಎಂದಿದ್ದು
ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದು ಆದಷ್ಟು ಬೇಗ ಚಿರತೆ ಹಿಡಿದು ಸ್ಥಳಾಂತರಿಸಿ ಎಂದು ಮಾವಿನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿಮಾಡಿದ್ದಾರೆ.


